Saturday, December 14, 2024
HomeUncategorizedಅಮೃತ ಭಾರತಿ ವಿದ್ಯಾಲಯ ದಲ್ಲಿ ಮಕ್ಕಳ ದಿನಾಚರಣೆ

ಅಮೃತ ಭಾರತಿ ವಿದ್ಯಾಲಯ ದಲ್ಲಿ ಮಕ್ಕಳ ದಿನಾಚರಣೆ

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಸಮಾರಂಭ ನಡೆಯಿತು.

ವಿದ್ಯಾರ್ಥಿಗಳಿಗೆ ತರಗತಿವಾರು ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಅಭಿನಂದನೆ ಸಲ್ಲಿಸಲಾಯಿತು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರು ಆಡಳಿತ ಮಂಡಳಿ ಅಮೃತ ಭಾರತಿ ವಿದ್ಯಾಲಯ ಶ್ರೀ ಶೈಲೇಶ ಕಿಣಿ ಅಧ್ಯಕ್ಷತೆಯನ್ನು ವಹಿಸಿದ್ದರು.

ವಿದ್ಯಾರ್ಥಿಗಳು ಚಟುವಟಿಕೆಯಿಂದ ಕೂಡಿರಬೇಕು ಹಲವಾರು ಚಟುವಟಿಕೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮವಾದಂತ ಮಾರ್ಗದರ್ಶನವನ್ನು ನೀಡುತ್ತದೆ.
ಸೈಕಲ್ ಸವಾರಿ ಈಜು ಹೀಗೆ ಹಲವಾರು ರೀತಿಯ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಕರಗತ ಮಾಡಿಕೊಂಡಿರಬೇಕು ಎಂದು ತಮ್ಮ ಅಧ್ಯಕ್ಷ ಭಾಷಣದಲ್ಲಿ ಮಾತನಾಡಿದರು.

ವೇದಿಕೆಯಲ್ಲಿ ಅಮೃತ ಭಾರತಿ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶಕುಂತಲಾ .
ಅಮೃತ ಭಾರತಿ ಹೈಸ್ಕೂಲ್ ವಿಭಾಗದ ಉಪಮುಖ್ಯ ಉಪಾಧ್ಯಾಯರು ಶ್ರೀ ಮಹೇಶ್ ಹೈಕಾಡಿ ಉಪಸ್ಥಿತರಿದ್ದರು

ಹೇಮಾ ಮಾತಾಜಿ ನಿರೂಪಿಸಿದರು , ಸ್ವಾಗತ ಶ್ರೀಮತಿ ಸೌಪರ್ಣಿಕಾ ಮಾಡಿದರು.ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.

RELATED ARTICLES
- Advertisment -
Google search engine

Most Popular