Monday, May 19, 2025
Homeಕಾರ್ಕಳರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಮಕ್ಕಳ ದಿನಾಚರಣೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಮಕ್ಕಳ ದಿನಾಚರಣೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ನಾಲ್ಕು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗೌರವ ಕಾರ್ಯಕ್ರಮ ದಿನಾಂಕ 26.11.2024 ಮಂಗಳವಾರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರುವಾಜೆ, ಕಾರ್ಕಳ ಇಲ್ಲಿ ಹಮ್ಮಿಕೊಳ್ಳಲಾಯ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು ವಿದ್ಯಾರ್ಥಿ, ಉದಯೋನ್ಮುಖ ಸಾಹಿತಿ/ಕವಯತ್ರಿ ಕುಮಾರಿ ಅವನಿ ಉಪಾಧ್ಯ ಇವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಮಾರ್ಗದರ್ಶಕರಾದ ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ.ಭರತೇಶ್ ಆದಿರಾಜ್, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಉಪೇಂದ್ರ ವಾಗ್ಲೆ, ಆನ್ಸ್ ಅಧ್ಯಕ್ಷೆ ಶರ್ಮಿಳಾ ರಮೇಶ್ ಶೆಟ್ಟಿ, ಉಪಸ್ಥಿತರಿದ್ದರು. ಗೌರವವಿಸಲ್ಪಟ್ಟ ವಿದ್ಯಾರ್ಥಿಗಳು : ಕುಮಾರಿ ಸಾನ್ವಿ ಶೆಟ್ಟಿ, ರೆಂಜಾಳ ಗ್ರಾಮ 100ಮೀ ಓಟ-ರಾಜ್ಯ ಮಟ್ಟದ ಆಟಗಾರ್ತಿ, ಸೃಜನ್ ಡಿ – ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರುವಾಜೆ, ಕಾರ್ಕಳ, 600ಮೀ ರಾಜ್ಯ ಮಟ್ಟದ ಆಟಗಾರ, ಕುಮಾರಿ ಭುವನೇಶ್ವರಿ, ಕಾರ್ಕಳ ಭಾರ ಎತ್ತುವ ಸ್ಪರ್ಧೆ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ, ಕುಮಾರಿ ಆರಾಧ್ಯ ಕಾರ್ಕಳ ಚೇತನ ವಿಶೇಷ ಶಾಲೆ- ನೃತ್ಯ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಬಹುಮಾನ. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸೃಷ್ಟಿ ಶೆಟ್ಟಿ ನೆರವೇರಿಸಿದರು, ಕುಮಾರಿ ಧಾರಿಣಿ ಉಪಾಧ್ಯ ಪ್ರಾರ್ಥನೆ ನೆರವೇರಿಸಿದರು, ಮಾಧವಿ ಕೆ  ವಂದಿಸಿದರು.

RELATED ARTICLES
- Advertisment -
Google search engine

Most Popular