Sunday, July 14, 2024
Homeರಾಜ್ಯಸಾಂಸ್ಕೃತಿಕ ಚಟುವಟಿಕೆಗಳಿಂದ ಮಕ್ಕಳ ಪರಿಜ್ಞಾನ ಹೆಚ್ಚುತ್ತದೆ - ರಾಧಕೃಷ್ಣ ಉಳಿಯತ್ತಡ್ಕ

ಸಾಂಸ್ಕೃತಿಕ ಚಟುವಟಿಕೆಗಳಿಂದ ಮಕ್ಕಳ ಪರಿಜ್ಞಾನ ಹೆಚ್ಚುತ್ತದೆ – ರಾಧಕೃಷ್ಣ ಉಳಿಯತ್ತಡ್ಕ

ದಾವಣಗೆರೆ : ಚಿತ್ರಕಲೆ, ಸಾಹಿತ್ಯ, ಸಂಗೀತ, ಯೋಗಾಸನ, ಧಾರ್ಮಿಕ ಸನಾತನ ಧರ್ಮದ ಪರಂಪರೆಯ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಜ್ಞಾನಶಕ್ತಿ ಹೆಚ್ಚಿಸುತ್ತದೆ ಬೇಸಿಗೆ. ರಜೆಗಳಲ್ಲಿ ಸಮಯ ವ್ಯರ್ಥ ಮಾಡದೆ ಈ
ಸಂಘಟನೆಗಳು ಇಂತಹ ಸತ್ಕಾರ್ಯ ನಿಜಕ್ಕೂ ಶ್ಲಾಘನೀಯ. ಮಕ್ಕಳಲ್ಲಿ ಹುದುಗಿರುವ ವಿವಿಧ ಕಲಾ ಪ್ರಕಾರಗಳನ್ನು ಅನಾವರಣಗೊಳಿಸಿ ಸೂಕ್ತ ಮುಕ್ತ ವೇದಿಕೆ ಕಲ್ಪಿಸುವ ದೂರದೃಷ್ಟಿಯ ಸಾಮಾಜಿಕ ಕಾಳಜಿ
ಇತರ ಸಂಘಟನೆಗಳಿಗೆ ಮಾದರಿ ಎಂದು ಹಿರಿಯ ಪತ್ರಕರ್ತ ಸಾಹಿತಿ ರಾಧಕೃಷ್ಣ ಉಳಿಯತ್ತಡ್ಕ ತಮ್ಮ ಅನಿಸಿಕೆ
ಹಂಚಿಕೊಂಡರು. ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆ ಮತ್ತು ಗೀತಜ್ಞಾನ ಯಜ್ಷ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕೇರಳ ರಾಜ್ಯದ, ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ಶಾರದಾ ಏಕಾಹ ಭಜನಾ ಮಂದಿರದ ಸಭಾಂಗಣದಲ್ಲಿ ಇತ್ತೀಚಿಗೆ 10 ದಿನಗಳ ಕಾಲ ನಡೆದ ಉಚಿತ ಬೇಸಿಗೆ ಶಿಬಿರದ ಸಮರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆಯ ಶಿಕ್ಷಕಿ ಉಮಾದೇವಿ ಮಾತನಾಡಿ, ಇಂತಹ ಶಿಬಿರಗಳು ಶಿಕ್ಷಣಕ್ಕೆ ಪೂರಕ ಮಕ್ಕಳ ಜೀವನೋತ್ಸವಕ್ಕೆ ಸ್ಪೂರ್ತಿ ತರುತ್ತಿರುವ ಈ ಕಾಯಕ ನಿಸ್ವಾರ್ಥದಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ನಡೆಸುತ್ತಿರುವ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ರಾಜ್ಯ ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲಿ ಎಂದು ಶುಭ ಕೋರಿದರು. ಈ ಶಿಬಿರದಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ತರಬೇತಿ
ಕಾರ್ಯಗಾರ ನಡೆಸಿಕೊಟ್ಟ ಪ್ರಭಾವತಿ, ಶಂಕರ ನಾರಾಯಣ ಭಟ್ ಕಿದೂರು, ಪಿ.ಎನ್.ಮೂಡಿತ್ತಾಯ, ಪಾಣಿ ಬಲ್ಲಾಳ್ ಮುಂತಾದವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಈ ಸಂಸ್ಥೆಗಳಿಂದ ಇಂತಹ ಅತ್ಯುತ್ತಮ ಶಿಬಿರಗಳು ಮುಂದುವರೆಯಲಿ ಎಂದು ಶುಭ ಹಾರೈಸಿದರು. ಎಲ್ಲಾ ಅತಿಥಿಗಳಿಗೂ ಶಿಬಿರದ ತರಬೇತಿ
ನೀಡಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಹುಮುಖ ಬಾಲ ಪ್ರತಿಭೆ ಕುಮಾರಿ ಅಪರ್ಣ ಯೋಗ ಪ್ರದರ್ಶನ ನೀಡಿ ನೆರೆದ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ
ಜಯಲಕ್ಷ್ಮಿ ಕಾರಂತ್ ಉಪಸ್ಥಿತರಿದ್ದರು. ಕುಮಾರ ವೇದಾಂತ್, ಕುಮಾರಿ ಅಪರ್ಣ ರವರ ಪ್ರಾರ್ಥನೆಯೊಂದಿಗೆ
ಪ್ರಾರಂಭವಾದ ಸಮಾರಂಭಕ್ಕೆ ಚಂದನ್ ಕಾರಂತ್ ಸ್ವಾಗತಿಸಿದರು. 10 ದಿನಗಳ ಶಿಬಿರದ ಕುರಿತಾದ ವರದಿ
ವಾಚನವನ್ನು ಪ್ರಭಾವತಿ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳು ಸಂತೋಷದಿಂದ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕುಮಾರ ಸಂಕರ್ಪಣ “ಮಂಡೂಕ ಚರಿತ್ರೆ” ಕುರಿತಾದ ಚಿಂತನೆಗಳೊಂದಿಗೆ ಮಕ್ಕಳಿಗೆ ಸನಾತನ ಧರ್ಮದ ಅರಿವು ಮೂಡಿಸಿದರು. ಸವಿತಾ ಮಹೇಶ್ ರವರು ಸನ್ಮಾನಿತರ ಕುರಿತು ಪರಿಚಯ ವ್ಯಕ್ತಪಡಿಸಿದರು. ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಲಕ್ಷ್ಮೀಶ ರಾವ್ ರವರು ಅಭಿನಂಧನಾ ಪತ್ರ, ಸ್ಮರಣಿಕೆ ನೀಡಿ ಗೌರವಿಸಿದರು. ಜಯಲಕ್ಷ್ಮಿ ರಾಮಚಂದ್ರ ಹೊಳ್ಳ ಶಿಸ್ತು ಬದ್ಧವಾಗಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಿಬಿರದ ರೂವಾರಿಗಳಾದ ಆರ್ ಶ್ರೀರಾಮ ಕಾರಂತ್, ತಾರಲತಾ ಅತಿಥಿಗಳಿಗೆ ನೆನಪಿನ ಕಾಣಿಕೆ ವಿತರಿಸುವ ಮೂಲಕ ವಂದನಾರ್ಪಣೆ ಮಾಡಿದರು. ಸುಸಂಪನ್ನಗೊಂಡ ಈ ಮಕ್ಕಳ ಉಚಿತ ಶಿಬಿರ ನಡೆಸಿಕೊಟ್ಟ ಕಲಾಕುಂಚ ಕೇರಳ ಗಡಿನಾಡ ಶಾಖೆ ಎಲ್ಲಾ ಪದಾಧಿಕಾರಿಗಳಿಗೆ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಕೃತಜ್ಞತೆ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular