ಮಂಗಳೂರು: ಚಿಲಿಂಬಿಯ ಶ್ರೀ ಶಿರಿಡಿ ಸಾಯಿಬಾಬಾ ಮಂದಿರದಲ್ಲಿ ಮಾ.29 ರಿಂದ31ರವರೆಗೆ 58ನೇ ಶ್ರೀರಾಮ ನವಮಿ ಉತ್ಸವ ನಡೆಯಲಿದೆ.
ಪ್ರತೀ ತಿಂಗಳ ಹುಣ್ಣಿಮೆಯಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ಗುರುಪಾದ ಪೂಜೆ ನಡೆಯಲಿದ್ದು, ಮಾ.29ರಂದು ಬೆಳಗ್ಗೆ 6.05 ರಿಂದ ಕಾಕಡ ಆರತಿ, 7ರಿಂದ ಪಂಚ ಗವ್ಯ ಶುದ್ಧಿ, ಗಣಹೋಮ ಪ್ರಾರಂಭ, ಪೂರ್ಣಾಹುತಿ ಧ್ವಜಾರೋಹಣ, ಅಷ್ಟೋ ತ್ತರ ಸಹಿತ ಮಂಗಳಾರತಿ, 9ರಿಂದ ವಿಷ್ಣು ಸಹಸ್ರನಾಮ, 10ರಿಂದ ಭಜನೆ, 11ರಿಂದ ಶ್ರೀ ದೇವಿ ಮಹಾತೈ ಪಾರಾಯಣ, 12ರಿಂದ ಮಹಾಪೂಜೆ, ಅನ್ನಸಂತ ರ್ಪಣೆ, 12.30 ರಿಂದ ಭಜನೆ ನಡೆಯಲಿದೆ.
ಸಂಜೆ 4ರಿಂದ ಪಟ್ಲ ಸತೀಶ್ ಶೆಟ್ಟಿ ಯವರ ಸಾರಥ್ಯದಲ್ಲಿ ಶ್ರೀರಾಮ ದರ್ಶನ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 6ಕ್ಕೆ ಧೂಪಾರತಿ, 7.30ರಿಂದ ಅಷ್ಟಾ ವಧಾನ ಸೇವೆ, 9ರಿಂದ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮಾ.30ರಂದು ಬೆಳಗ್ಗೆ 6.05ರಿಂದ
ಫೋನ್ ವಾದನ, 8.30ರಿಂದ ವಿಷ್ಣು ಸಹ ಸ್ರನಾಮ, 9ಕ್ಕೆ ದೀಪಾರಾಧನೆ ನಡೆಯ ಲಿದೆ. ಬೆಳಗ್ಗೆ 9.30ರಿಂದ ಬ್ರಹ್ಮಶ್ರೀ ಪ್ರಕಾಶ್ ಕಡಮಣ್ಣಾಯ ಕುಂಬಳೆ ಇವರ ನೇತೃತ್ವದಲ್ಲಿ ಶ್ರೀರಾಮ ತಾರಕ ಯಾಗ ಹಾಗೂ ಧನ್ವಂತರಿ ಹವನ ನಡೆಯಲಿದೆ.
ಮಧ್ಯಾಹ್ನ 12.30ರಿಂದ ಸಂಜೆ 6ರವ ರೆಗೆ ಭಜನೆ, 6ಕ್ಕೆ ಧೂಪಾರತಿ ಹಾಗೂ 7ಕ್ಕೆ ಪಲ್ಲಕಿ ಉತ್ಸವ, ಶ್ರೀ ಸಾಯಿಬಾಬಾರವರ ನಗರ ಪ್ರದಕ್ಷಿಣೆ ನಂತರ ಮಹಾಪೂಜೆ, ಶೇಜಾರತಿ ಹಾಗೂ ಪ್ರಸಾದ ವಿತರಣೆ ನಡೆ ಯಲಿದೆ. ಮಾ.31ರಂದು ಬೆಳಗ್ಗೆ 8ಕ್ಕೆ ಓಕುಳಿ, ಸಾಯಿನಾಥರಿಗೆ ಅವಕೃತ ಸ್ನಾನ ಕಾಕಡ ಆರತಿ, 6.30ರಿಂದ ಸ್ಯಾಕ್ಸ್ ನಡೆಯಲಿದೆ.