ಪತ್ರಕರ್ತರು, ಹಾಗೂ ಕಲ್ಪತರು ಕಲಾ ಟ್ರಸ್ಟ್ (ರಿ.)ಅಧ್ಯಕ್ಷರೂ, ಬಹುಮುಕೀ ಸಂಘಟಕರೂ ಆದ ಚಿಟಗೇರಿ ಕೊಟ್ರೇಶಿ ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ, ಕರ್ನಾಟಕ ರಾಜ್ಯ ವಿಜಯಪುರ ಜಿಲ್ಲೆಯ ಕನ್ನಡ ಭವನ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ರಜತ ಸಂಭ್ರಮ, ವರ್ಷವಾದ 2025 ರಲ್ಲಿ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.
ಕಾಸರಗೋಡು ಕನ್ನಡ ಭವನದ ನಿರ್ದೇಶಕರಾದ ಪತ್ರಕರ್ತ ಸಿ. ವೈ. ಮೇನಶಿನಕಾಯಿ ಕೊಟ್ರೇಶಿಯವರ ನಾಮನಿರ್ದೇಶನ ಮಾಡಿದರು. ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ಅನುಮೋದಿಸಿದರು. ಸರ್ವಾನುಮತದಿಂದ ಆಯ್ಕೆಯಾದ ಚಿಟಗೇರಿ ಕೊಟ್ರೇಶಿ ಅವರು, ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಾಯ, ಕನ್ನಡ ಭವನ ಉಚಿತ ವಸತಿ ಸೌಕರ್ಯ, ಕರ್ನಾಟಕ ದಿಂದ ಕಾಸರಗೋಡು ಪ್ರದೇಶಕ್ಕೆ ಆಗಮಿಸುವ ಸಾಹಿತ್ಯ, ಸಾಂಸ್ಕೃತಿಕ ರಾಯಭಾರಿಗಳಿಗೆ.
ಕನ್ನಡ ಭವನ ರಜತ ಸಂಭ್ರಮ ವಿಶೇಷ ಕಾರ್ಯಕ್ರಮ ಸಂಘಟನೆ, ಸಂಯೋಜನೆಯ, ಜವಾಬ್ದಾರಿ ಸ್ವೀಕರಿಸಿ ಜಿಲ್ಲಾ ಘಟಕವನ್ನು ವಿಸ್ತರಿಸಿ ಕಾರ್ಯ ಪ್ರವ್ರಿತ್ತರಾಗಬೇಕೆಂದು ಸಂಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಚಿಟಗೇರಿ ಕೊಟ್ರೇಶಿ ಕನ್ನಡ ಭವನದ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಆಯ್ಕೆ
RELATED ARTICLES