Saturday, July 20, 2024
Homeಉಡುಪಿಚಿಟ್ಪಾಡಿ ಹೊಸಮಠ ಪ್ರಸನ್ನ ಸೋಮೇಶ್ವರ ದೇವಸ್ಥಾನ : ಬ್ರಹ್ಮಕಲಶೋತ್ಸವ ಚಪ್ಪರ ಮಹೂರ್ತ

ಚಿಟ್ಪಾಡಿ ಹೊಸಮಠ ಪ್ರಸನ್ನ ಸೋಮೇಶ್ವರ ದೇವಸ್ಥಾನ : ಬ್ರಹ್ಮಕಲಶೋತ್ಸವ ಚಪ್ಪರ ಮಹೂರ್ತ

ಉಡುಪಿ: ಚಿಟ್ಪಾಡಿ ಹೊಸಮಠ ಶ್ರೀ ಪ್ರಸನ್ನ ಸೋಮೇಶ್ವರ ದೇವಸ್ಥಾನ, ಶ್ರೀದೇವಿ ಭೂದೇವಿ ಸಹಿತ ಶ್ರೀ ಶ್ರೀನಿವಾಸ ದೇವರು, ಪಂಜುರ್ಲಿ ಮತ್ತು ಪರಿವಾರ ದೈವಗಳ ನೂತನ ಶಿಲಾಮಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಎ. 28ರಿಂದ ಮೇ 3ರ ವರೆಗೆ ನಡೆಯಲಿದೆ. ಈ ಪ್ರಯುಕ್ತ ಚಪ್ಪರ ಮಹೂರ್ತ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆಯು ಬ್ರಹ್ಮಶ್ರೀ ಹಯವದನ ತಂತ್ರಿಯವರ ನೇತೃತ್ವದಲ್ಲಿ ಊರಿನ ಹಿರಿಯರ ಉಪಸ್ಥಿತಿಯಲ್ಲಿ ನಡೆಯಿತು.

ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಘುಪತಿ ಆಚಾರ್ಯ ಚಿಟ್ಪಾಡಿ , ಕಾರ್ಯದರ್ಶಿ ಸುಬ್ರಹ್ಮಣ್ಯ ಆಚಾರ್ಯ ಚಿಟ್ಪಾಡಿ ಅವರು, ಊರ, ಪರವೂರ ಭಕ್ತರ ಸಂಪೂರ್ಣ ಸಹಕಾರವನ್ನು ಯಾಚಿಸಿದರು. ಬ್ರಹ್ಮಕಲಶೋತ್ಸವ ಚಪ್ಪರದ ಉಸ್ತುವಾರಿ ಗಣೇಶ್ ಇಂದಿರಾನಗರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಶೆಟ್ಟಿ ಚಿಟ್ಪಾಡಿ , ತಾಂತ್ರಿಕ ಸಲಹೆಗಾರ ಶ್ರೀಧರ ಆಚಾರ್ಯ, ಸಮಿತಿ ಪದಾಧಿಕಾರಿಗಳಾದ ನಂದ ಕುಮಾರ್, ರವೀಂದ್ರ ನಾಯಕ್, ವಿನುತಾ ಆಚಾರ್ಯ, ಸಾವಿತ್ರಿ ಆಚಾರ್ಯ, ರಾಜಲಕ್ಷ್ಮೀ ಮೇಲಂಟ, ರವಿ ಆಚಾರ್ಯ ಚಿಟ್ಪಾಡಿ , ವರುಣ್ ಆಚಾರ್ಯ ಚಿಟ್ಪಾಡಿ , ನಟರಾಜ ಮೇಲಂಟ, ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular