ಅಂತರ್ ರಾಜ್ಯ ಮಟ್ಟದಲ್ಲಿ ಲೇಖನ, ಪ್ರಬಂಧ, ಕಥೆ ಮತ್ತು ಕವನ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಹಲವು ಭಾಷೆಗಳಲ್ಲಿ ಬರಹದ ಮೂಲಕ ಹಲವಾರು ಬಹುಮಾನ ಮತ್ತು ಪ್ರಶಸ್ತಿಗಳನ್ನು ಗಳಿಸಿದ ಸಾಧಕಿ ಮತ್ತು ಬಹುಮುಖ ಪ್ರತಿಭೆಯಾದ ಯುವ ಸಾಹಿತಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಇವರ ಮಡಿಲಿಗೆ ಇದೀಗ ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ ಮತ್ತು ಚೇತನ ಫೌಂಡೇಷನ್ ಕರ್ನಾಟಕ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ )ಬೆಂಗಳೂರು ಆಯೋಜಿಸಿರುವ ವಂದೇ ಮಾತರಂ ಕಾರ್ಯಕ್ರಮದಲ್ಲಿ “ಕಾವ್ಯ ಚೇತನ “ಪ್ರಶಸ್ತಿ ಗೆ ಆಯ್ಕೆಯಾಗಿರುತ್ತಾರೆ.
ಈ ಪ್ರಶಸ್ತಿ ಪ್ರದಾನವು ಆಗಸ್ಟ್ 18 ರ ರವಿವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ.ಇವರ ಹೆಸರು ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ನಲ್ಲಿ ದಾಖಲಾಗಿರುತ್ತದೆ. ಇವರು ಪ್ರಸ್ತುತ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇಲ್ಲಿ ಉಪನ್ಯಾಸಕಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.