ಹಳೆಯಂಗಡಿ : ಕ್ರಿಸ್ತನು ಶಾಂತಿದೂತನು ಯೇಸು ಕ್ರಿಸ್ತನು ಈ ಲೋಕಕ್ಕೆ ಶಾಂತಿ ನೀಡಲು ಆಗಮಿಸಿದ್ದರು ಕ್ರಿಸ್ಮಸ್ ಹಬ್ಬದ ಮೂಲಕ ಪ್ರಪಂಚದಾದ್ಯಂತ ಶಾಂತಿ ನೆಲೆಸಲು ಹಾರೈಸುತ್ತಿದ್ದೇನೆ ಎಂದು ಚರ್ಚ್ ಆಫ್ ಸೌತ್ ಇಂಡಿಯಾ ಕರ್ನಾಟಕ ಸದರ್ನ್ ಡಯಾಸಿಸ್ ನಿವೃತ್ತ ಕೌಶಾಧಿಕಾರಿ ರೆವೆರೆಂಡ್ಎ ಡ್ವಿನ್ ವಾಲ್ಟರ್ ನುಡಿದರು..
ಅವರು ಹಳೆ ಅಂಗಡಿಯ ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚಿನ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು.
ಸ್ಥಳೀಯ ಸಭಾ ಪಾಲಕರಾದ ರೆವೆರೆಂಡ್ ಅಮೃತ ರಾಜ್ ಕೋಡೆ, ರವರು ಪ್ರಾರ್ಥನೆಯಲ್ಲಿ ಮುನ್ನಡೆಸಿದರು. ಭಾನುವಾರ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಯುವಜನ ಕೂಟದವರಿಂದ ಕ್ರಿಸ್ಮಸ್ ಹಬ್ಬದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಭಾ ಪರಿಪಾಲನ ಸಮಿತಿಯ ಆಸ್ಟಿನ್ ಕರ್ಕಡ, ಹೆಚ್ ವಸಂತ ಬರ್ನಾಡ್, ಲಾವಣ್ಯ ಕೋಟ್ಯಾನ್, ಶರ್ಲಿ ಬಂಗೇರ ಜೇಮ್ಸ್ ಕರ್ಕಡ ಮತ್ತು ಸಿಡ್ನಿ ಕರ್ಕಡ ಕಾರ್ಯಕ್ರಮ ರೂಪಿಸಿದ್ದರು.