ಉಡುಪಿ : ‘ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ’ ಧ್ಯೇಯದೊಂದಿಗೆ 23 ವರ್ಷಗಳಿಂದ ಮೈಸೂರನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯದಾದ್ಯಂತ ಚುಟುಕು ಸಾಹಿತ್ಯದ ಏಳಿಗೆಗೆ ಶ್ರಮಿಸುತ್ತಾ ಕಾರ್ಯಾಚರಿಸುತ್ತಿರುವ ಚುಟುಕು ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಲೇಖಕಿ ಸುಲೋಚನಾ ಪಚ್ಚಿನಡ್ಕ ಅವರನ್ನು ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಅವರು ನೇಮಕ ಮಾಡಿರುತ್ತಾರೆ. ಮುಂದಿನ ಆದೇಶದವರೆಗೆ ಸುಲೋಚನಾ ಪಚ್ಚಿನಡ್ಕ ಅವರು ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.
25 ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಸುಲೋಚನಾ ಪಚ್ಚಿನಡ್ಕ ಅವರು ಒಂದು ಕವನ ಸಂಕಲನ, ಎರಡು ಆತ್ಮ ಚರಿತ್ರೆ, ಒಂದು ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಇವರ ತುಳು ಕಥಾ ಸಂಕಲನ ‘ತುಡರ್’ ಪ್ರಕಟಣೆಯ ಹಂತದಲ್ಲಿದೆ. ನೂರಾರು ಸಾಹಿತ್ಯ ಗೋಷ್ಠಿಗಳಲ್ಲಿ ಸಾಹಿತಿಯಾಗಿ ಭಾಗವಹಿಸಿದ ಅನುಭವವನ್ನು ಹೊಂದಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.