ಮಂಗಳೂರು: ‘ಎಂಎಸ್‍ಎಂಇ’ಗಳು ತಮ್ಮ ಉದ್ಯಮ – ವಹಿವಾಟಿನ ಉದ್ದೇಶಗಳನ್ನು ಸಾಕಾರಗೊಳಿಸಲು ಮತ್ತು ವಹಿವಾಟಿನ ಬೆಳವಣಿಗೆ ಹೆಚ್ಚಿಸಲು ಸೂಕ್ತ ಸಾಲದ ಆಯ್ಕೆಗಳನ್ನು ಪಡೆದುಕೊಳ್ಳಲು ಸಿಬಿಲ್ ರ್ಯಾಂಕಿಂಗ್ ಪ್ರಯೋಜನಕಾರಿ ಎನಿಸಿದೆ.
ಕಡಿಮೆ ಶ್ರೇಣಿಯು (ರ್ಯಾಂಕ್) ಅತ್ಯುತ್ತಮ ಸಾಲದ ಅರ್ಹತೆಯನ್ನು ಸೂಚಿಸುತ್ತದೆ. ಇದರಿಂದ ‘ಎಂಎಸ್‍ಎಂಇ’ಗಳು ಕಡಿಮೆ ಬಡ್ಡಿದರಗಳು ಮತ್ತು ಅನುಕೂಲಕರ ಮರುಪಾವತಿ ಆಯ್ಕೆಗಳಂತಹ ಪ್ರಯೋಜನಕಾರಿ ನಿಯಮಗಳ ಅನ್ವಯ ಸಾಲ ಪಡೆಯುವುದು ಸುಲಭವಾಗುತ್ತದೆ. ಇದು ವಹಿವಾಟಿನ ಬೆಳವಣಿಗೆ ಮತ್ತು ಕಾರ್ಯಾಚರಣೆಯ ಸಾಮಥ್ರ್ಯ ಹೆಚ್ಚಿಸಲು ಅವಶ್ಯಕವಾಗಿರಲಿದೆ ಎಂದು ಪ್ರಕಟಣೆ ಹೇಳಿದೆ.
ದೇಶದ ಅರ್ಥ ವ್ಯವಸ್ಥೆಯ ಬೆನ್ನೆಲುಬಾಗಿರುವ ‘ಎಂಎಸ್‍ಎಂಇ’ ಉದ್ಯಮಿಗಳು, ವಿಸ್ತರಣೆ ಚಟುವಟಿಕೆ ಮತ್ತಿತರ ಅಗತ್ಯಗಳಿಗಾಗಿ ತಮ್ಮ ಹೆಚ್ಚುತ್ತಿರುವ ಬಂಡವಾಳದ ಅವಶ್ಯಕತೆಗಳಿಗೆ ಹಣಕಾಸು ನೆರವು ಪಡೆಯಲು ತಮ್ಮ ಸಾಲದ ಅರ್ಹತೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರಲಿದೆ. ಸಿಬಿಲ್ ಎಂಎಸ್‍ಎಂಇ ರ್ಯಾಂಕ್ (ಸಿಎಂಆರ್) ಮತ್ತು ಕಂಪನಿ ಕ್ರೆಡಿಟ್ ವರದಿ (ಸಿಸಿಆರ್) ನಂತಹ ಹಣಕಾಸು ಸಾಧನಗಳು ಉದ್ಯಮ / ಕಂಪನಿಯ ಸಾಲ ಮರುಪಾವತಿ ವಿಧಾನ ಹಾಗೂ ಸ್ವರೂಪದ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ಒದಗಿಸುತ್ತವೆ ಎಂದು ಪ್ರಕಟಣೆ ತಿಳಿಸಿದೆ.
ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‍ಎಂಇ) ಸಚಿವಾಲಯದ ಉದ್ಯಮ್ ನೋಂದಣಿ ಅಂತರ್ಜಾಲ ತಾಣದ (ಯುಆರ್‍ಪಿ) ಪ್ರಕಾರ, ದೇಶದಲ್ಲಿ 6.30 ಕೋಟಿ ‘ಎಂಎಸ್‍ಎಂಇ’ಗಳು ಕಾರ್ಯನಿರ್ವಹಿಸುತ್ತಿವೆ. ಭಾರತವು 2030ರ ವೇಳೆಗೆ 7 ಲಕ್ಷ ಕೋಟಿ ಡಾಲರ್ ಆರ್ಥಿಕತೆಯತ್ತ ಸಾಗುವ ಹಾದಿಯಲ್ಲಿ ಈ ‘ಎಂಎಸ್‍ಎಂಇ’ಗಳು ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ನಾವೀನ್ಯತೆ ಉತ್ತೇಜನ ಮತ್ತು ರಫ್ತು ಸಾಮಥ್ರ್ಯ ಹೆಚ್ಚಳದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ವಿವರಿಸಿದೆ.