ಲಕ್ನೊ: ಡಿಜೆ ಹಾಕುವ ಸಂಬಂಧ ಗ್ರಾಮಸ್ಥರು ಮತ್ತು ದೇವಸ್ಥಾನವೊಂದರ ಅರ್ಚಕನ ನಡುವೆ ಸಂಭವಿಸಿದ ಜಗಳದಲ್ಲಿ ಅರ್ಚಕನನ್ನು ಥಳಿಸಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿ ನಡೆದಿದೆ. ಆಕ್ರೋಶಿತ ಗ್ರಾಮಸ್ಥರು ಅರ್ಚಕನನ್ನು ಕೋಲುಗಳಿಂದ ಥಳಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅರ್ಚಕ ಅಶೋಕ್ ಚೌಬೆ ಎಂಬವರ ಜೊತೆ ಕೆಲವರು ಡಿಜೆ ಹಾಕುವ ವಿಷಯದಲ್ಲಿ ವಾಗ್ವಾದ ಮಾಡಿದ್ದಾರೆ. ವಾಕ್ಸಮರ ಜೋರಾಗಿ ಕೆಲವರು ಅರ್ಚಕನಿಗೆ ಕೋಲುಗಳಿಂದ ಥಳಿಸಿದ್ದಾರೆ ಎಂದು ದೇವರಿಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ್ ಶರ್ಮಾ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಹೌಸ್ಲಾ ಪಾಸ್ವಾನ್ ಸಹಿತ ಮೂವರನ್ನು ಬಂಧಿಸಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ. ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.