ಮುಲ್ಕಿ ಕೆಂಪುಗುಡ್ಡೆ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಹಾಗೂ ಸಾರ್ವಜನಿಕರ ಸಹಯೋಗದಿಂದ ಸ್ವಚ್ಛ ಪಂಬದಗುಡ್ಡೆ ಪರಿಸರದಲ್ಲಿ ಭಾನುವಾರ ಬೆಳಿಗ್ಗೆ 2 ಗಂಟೆಗಳ ಕಾಲ ಸ್ವಚ್ಛತಾ ಶ್ರಮದಾನ ನಡೆಯಿತು.
ಮಾರ್ಗದ ಇಕ್ಕೆಲಗಳಲ್ಲಿ ಎಸೆದ ಪ್ಲಾಸ್ಟಿಕ್ ಪೊಟ್ಟಣಗಳು, ಗಾಜು, ಪಾನೀಯದ ಬಾಟಲಿಗಳು, ಹಳೆಯ ಬ್ಯಾನರ್ ಗಳು, ಚಪ್ಪಲಿ, ಮಕ್ಕಳ ಡೈಪರ್ ಗಳು ಮುಂತಾದ 20 ಚೀಲ ಕಸವನ್ನು ಎತ್ತಿ ಶುಚಿಗೊಳಿಸಲಾಯಿತು.
ಕೆಂಪುಗುಡ್ಡೆ ಪರಿಸರದಲ್ಲಿ ಸ್ವಚ್ಛತೆಯ ಬಗ್ಗೆ ಸೂಚನಾ ಫಲಕಗಳನ್ನು ಹಾಕಲಾಯಿತು ದಟ್ಟ ಕಾನನ, ಶುದ್ಧ ಶಾಂಭವಿಯ ನಡುವೆ ಇರುವ ಸಮೃದ್ಧ ಮುಲ್ಕಿಯ ಸ್ವಚ್ಛತೆಗೆ ಸಹಕರಿಸಲು ದಾರಿಹೋಕರಲ್ಲಿ ಮನವಿ ಮಾಡಲಾಯಿತು. ಸತ್ಯದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಅಧ್ಯಕ್ಷರಾದ ಬಿ ಶಿವಪ್ರಸಾದ್ ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಕೋಶಾಧಿಕಾರಿ ಅನಿಲ್ ಕುಮಾರ್ ಪ್ರಾಂತ್ಯ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್ ಸದಸ್ಯರಾದ ಸಂತೋಷ್, ಪ್ರಣವ್ ಶರ್ಮಾ, ನಗರ ಪಂಚಾಯತ್ ಸದಸ್ಯರಾದ ವಂದನ ಕಾಮತ್, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.