ಕಡಂದಲೆ : ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ, ಆರೋಗ್ಯವೇ ಭಾಗ್ಯ, ಉತ್ತಮವಾದ ಆರೋಗ್ಯಕ್ಕಾಗಿ ಸ್ವಚ್ಛ, ಸಮೃದ್ಧ,ಸಮತೋಲಿತ ಆಹಾರ ಅತ್ಯವಶ್ಯಕ. ಜೊತೆಯಲ್ಲಿ ಅಡುಗೆ ಕಾರ್ಯಕ್ರಮದಲ್ಲಿ ಸ್ವಚ್ಛತೆ,ಆರೋಗ್ಯಕರ ಪರಿಸರ ನಿರ್ಮಾಣ, ಅಡುಗೆಯ ಮಹತ್ವ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರೆಲ್ಲರಿಗೂ ಅರಿವು ಮೂಡಿಸಬೇಕೆನ್ನುವ ನಿಟ್ಟಿನಲ್ಲಿ ಬೆಂಕಿ ರಹಿತ ಅಡುಗೆಯ ಸ್ಪರ್ಧಾ ಕಾರ್ಯಕ್ರಮವನ್ನು ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ದಿನಕರ್ ಕುಂಭಾಶಿ ಯವರು ಸ್ವಾಗತಿಸಿದರು.
ತೀರ್ಪುಗಾರರಾಗಿ ವೆಂಕಟೇಶ್ ನಾಯ್ಕ, ಸೀತಾರಾಮ್ ಸಾಲ್ಯಾನ್, ಪಾಲಡ್ಕ ಅರೋಗ್ಯ ಸಹಾಯಕಿ ಶ್ವೇತಾ ಆರ್, ಪವಿತ್ರ ಆಶಾ ಕಾರ್ಯಕರ್ತೆ ಭಾಗವಹಿಸಿದರು.
ಸ್ಪರ್ಧೆಯಲ್ಲಿ 8 ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದರು.
ಸುಮಾರು 101 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.
ಶಿಕ್ಷಕ – ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.