ಮೊಗ್ರು : ಇಂದು(ಆ.25) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ ಮೊಗ್ರು ಒಕ್ಕೂಟದ ವತಿಯಿಂದ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂದಿರ ಉಂತನಾಜೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸ್ವಚ್ಛತಾ ಶ್ರಮದಾನವನ್ನು ನಡೆಸಲಾಯಿತು. ಭಜನಾ ಮಂದಿರದ ಆವರಣವನ್ನು ಸ್ವಚ್ಚಗೊಳಿಸಲಾಯಿತು. ಮತ್ತು ಸುತ್ತಲೂ ಬೆಳೆದಿದ್ದ ಕಳೆ ಗಿಡಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಈ ಸ್ವಚ್ಛತಾ ಕಾರ್ಯದಲ್ಲಿ ಮೊಗ್ರು ಒಕ್ಕೂಟದ ಸದಸ್ಯರು, ಸೇವಾಪ್ರತಿನಿಧಿ ಶ್ರೀಮತಿ ಚಂದ್ರಕಲಾ ಭಾಗವಹಿಸಿದರು. ಭಜನಾ ಮಂಡಳಿ ಅಧ್ಯಕ್ಷರಾದ ಸೀತರಾಮ ಗೌಡ, ಉಪ್ಪ ರವರು ಸ್ವಚ್ಛತಾ ಸೇವಾಕಾರ್ಯದಲ್ಲಿ ಭಾಗಿಯಾದವರೆಲ್ಲರಿಗೂ ಧನ್ಯವಾದ ಸಲ್ಲಿಸಿದರು.