Monday, December 2, 2024
Homeಮಂಗಳೂರುವಿದ್ಯುತ್‌ಚಾಲಿತ ವಾಹನಗಳ (ಇವಿ) ಚಾರ್ಜಿಂಗ್ ಕೇಂದ್ರಗಳ ಹೊಸ ಜಾಲ ನಿರ್ಮಿಸಲು ಕ್ಲೈಮೇಟ್‌ಪ್ಲೆಡ್ಜ್‌ ಹೊಸ ಕ್ರಿಯಾ ಯೋಜನೆ

ವಿದ್ಯುತ್‌ಚಾಲಿತ ವಾಹನಗಳ (ಇವಿ) ಚಾರ್ಜಿಂಗ್ ಕೇಂದ್ರಗಳ ಹೊಸ ಜಾಲ ನಿರ್ಮಿಸಲು ಕ್ಲೈಮೇಟ್‌ಪ್ಲೆಡ್ಜ್‌ ಹೊಸ ಕ್ರಿಯಾ ಯೋಜನೆ

ಭಾರತದಲ್ಲಿ ವಿದ್ಯುತ್‌ಚಾಲಿತ ವಾಹನ ಬಳಕೆ ತ್ವರಿತಗೊಳಿಸಲು ಜಂಟಿ ನಿರ್ವಹಣೆಯ ಚಾರ್ಜಿಂಗ್ ಕೇಂದ್ರಗಳ ಹೊಸ ಜಾಲ ಪ್ರಾರಂಭಿಸಿದ ಕ್ಲೈಮೇಟ್ ಪ್ಲೆಡ್ಜ್

• ಜಂಟಿಯಾಗಿ ನಿರ್ವಹಿಸುವ ಈ ಚಾರ್ಜಿಂಗ್ ಕೇಂದ್ರಗಳು ನವೀಕರಿಸಬಹುದಾದ ಇಂಧನ ಚಾಲಿತವಾಗಿದ್ದು, 2030ರ ವೇಳೆಗೆ ಬೆಂಗಳೂರಿನಲ್ಲಿ ಸುಮಾರು 5,500 ವಿದ್ಯುತ್‌ಚಾಲಿತ ವಾಹನಗಳಿಗೆ ನೆರವಾಗಲಿವೆ

ಮಂಗಳೂರು, ಸೆಪ್ಟೆಂಬರ್ 17, 2024: ಉದ್ಯಮ ಪಾಲುದಾರರ ಮತ್ತು ವಾಗ್ದಾನಕ್ಕೆ ಅಂಕಿತ ಹಾಕಿರುವ ಕಂಪನಿಗಳ ನೆರವಿನಿಂದ ಬೆಂಗಳೂರಿನಲ್ಲಿ ಜಂಟಿಯಾಗಿ ನಿರ್ವಹಿಸುವ ವಿದ್ಯುತ್‌ಚಾಲಿತ ವಾಹನಗಳ (ಇವಿ) ಚಾರ್ಜಿಂಗ್ ಕೇಂದ್ರಗಳ ಹೊಸ ಜಾಲ ನಿರ್ಮಿಸಲು ಕ್ಲೈಮೇಟ್‌ಪ್ಲೆಡ್ಜ್‌ ಹೊಸ ಕ್ರಿಯಾ ಯೋಜನೆಯಾಗಿರುವ ʼಜಂಟಿಯಾಗಿ ನಿರ್ವಹಿಸುವ ಏಕೀಕೃತ ಕೊನೆಯ ಮೈಲಿ ವಿದ್ಯುದೀಕರಣʼ (ಜೆಒಯುಎಲ್‌ಇ) ಉಪಕ್ರಮ ಪ್ರಕಟಿಸಿದೆ.
ಅಮೆಜಾನ್ ಮತ್ತು ಗ್ಲೋಬಲ್ ಆಪ್ಟಿಮಿಸಂನಿಂದ 2019 ರಲ್ಲಿ ಜಂಟಿಯಾಗಿ ಸ್ಥಾಪಿಸಿರುವ -ಕ್ಲೈಮೇಟ್ ಪ್ಲೆಡ್ಜ್, ಪ್ಯಾರಿಸ್ ಒಪ್ಪಂದಕ್ಕಿಂತ 10 ವರ್ಷಗಳ ಮೊದಲೇ 2040ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧಿಸುವ ಬದ್ಧತೆ ಹೊಂದಿದೆ.

ವಾಗ್ದಾನಕ್ಕೆ ಅಂಕಿತ ಹಾಕಿರುವ ಉದ್ಯಮಗಳು ಮತ್ತು ಪಾಲುದಾರರು 2030ರ ವೇಳೆಗೆ ಈ ಯೋಜನೆಯಡಿ ಒಟ್ಟಾರೆ 2.65 ದಶಲಕ್ಷ ಡಾಲರ್‌ಗಿಂತಲೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದ್ದಾರೆ. ಅಮೆಜಾನ್‌, ಮಹೀಂದ್ರಾ ಲಾಜಿಸ್ಟಿಕ್ಸ್, ಉಬರ್, ಎಚ್‌ಸಿಎಲ್‌ಟೆಕ್‌ಮತ್ತು ಮೆಜೆಂಟಾ ಮೊಬಿಲಿಟಿಯು ವಿದ್ಯುತ್‌ಚಾಲಿತ ವಾಹನಗಳ (ಇವಿ) ಚಾರ್ಜಿಂಗ್ ಕೇಂದ್ರಗಳ ಬಳಕೆ ಹೆಚ್ಚಿಸಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿವೆ. ಈ ಮೂಲಸೌಲಭ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಈ ಕಂಪನಿಗಳು ತಮ್ಮ ವಿದ್ಯುತ್‌ಚಾಲಿತ ವಾಹನಗಳ ಚಾರ್ಜಿಂಗ್ ಅಗತ್ಯಗಳನ್ನು ಈ ಚಾರ್ಜಿಂಗ್‌ಕೇಂದ್ರಗಳ ಮೂಲಕವೇ ಈಡೇರಿಸಿಕೊಳ್ಳಲು ಉದ್ದೇಶಿಸಿವೆ. ʼಇವಿʼ ಉದ್ಯಮದ ಪಾಲುದಾರ ಕಂಪನಿಯಾಗಿರುವ ಭಾರತ ಮೂಲದ ಇವಿ ಚಾರ್ಜಿಂಗ್ ವೇದಿಕೆಯಾಗಿರುವ ಕಜಮ್, ಜಂಟಿಯಾಗಿ ನಿರ್ವಹಿಸುವ ಚಾರ್ಜಿಂಗ್ ಕೇಂದ್ರಗಳ ಜಾಲವನ್ನು ನಿರ್ಮಿಸಲಿದೆ. ನವೀಕರಿಸಬಹುದಾದ ಇಂಧನ ಪೂರೈಕೆ ಕಂಪನಿಯಾಗಿರುವ ಗ್ರಿಂಕೊ ಮತ್ತು ಕಾರ್ಯತಂತ್ರದ ಸಲಹಾ ಪಾಲುದಾರ ಕಂಪನಿ ಡೆಲಾಯ್ಟ್ ಸಹ ಈ ಯೋಜನೆಗೆ ಅಗತ್ಯ ಬೆಂಬಲ ನೀಡಲಿವೆ.

2030ರ ವೇಳೆಗೆ ಬೆಂಗಳೂರಿನಲ್ಲಿ ತ್ರಿಚಕ್ರ ವಾಹನ, ಕ್ಯಾಬ್ ಸೇವೆ ಮತ್ತು ಕಾರ್ಪೊರೇಟ್‌ಗಳ ಬಳಕೆಗೆ ಶೇ 100ರಷ್ಟು ವಿದ್ಯುತ್‌ಚಾಲಿತ (ಇವಿ) ವಾಹನಗಳನ್ನು ಬಳಸುವ ಗುರಿಯೂ ಸೇರಿದಂತೆ ವಿದ್ಯುತ್‌ಚಾಲಿತ ವಾಹನಗಳಿಗೆ ಭಾರತದಲ್ಲಿ ಬದಲಾವಣೆ ಬೆಂಬಲಿಸುವ ಈ ಜಂಟಿ ಕ್ರಿಯಾ ಉಪಕ್ರಮ ಪ್ರಾರಂಭಿಸಲು ಪ್ರತಿಜ್ಞೆಗೆ ಅಂಕಿತ ಹಾಕಿರುವವರ ಜೊತೆಯಲ್ಲಿ ಕೆಲಸ ಮಾಡಲು ನಮಗೆ ಹೆಮ್ಮೆಯಾಗುತ್ತದೆʼ ಎಂದು ದಿ ಕ್ಲೈಮೇಟ್ ಪ್ಲೆಡ್ಜ್‌ನ ಜಾಗತಿಕ ಮುಖ್ಯಸ್ಥ ಸ್ಯಾಲಿ ಫೌಟ್ಸ್‌ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular