ವಿದ್ಯಾರ್ಥಿಗಳು ಕ್ರೀಡೆಯ ಮೂಲಕ ದೈಹಿಕ ಸಾಮರ್ಥ್ಯವನ್ನು ಗಟ್ಟಿಗೊಳಿಸಿ ಕೊಳ್ಳಬೇಕು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿಕೊಳ್ಳಬೇಕು. ಸೋಲು ವಿಜಯದ ಮೆಟ್ಟಿಲು ಎನ್ನುವುದನ್ನು ತಿಳಿದುಕೊಂಡು ಮುಂದಿನ ಪ್ರಯತ್ನವನ್ನು ಹೆಚ್ಚು ಗಮನವಿಟ್ಟು ಮಾಡಿದರೆ ಜಯ ನಿಮ್ಮದಾಗುತ್ತದೆ. ಪಂದ್ಯಾಟದಲ್ಲಿ ಗೆದ್ದಂತ ಎಲ್ಲ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪಿ. ಆರ್. ಎನ್. ಅಮೃತ ಭಾರತಿ ವಸತಿ ನಿಲಯದ ಸದಸ್ಯರು ರಾಮಕೃಷ್ಣ ಆಚಾರ್ಯ ಹೆಬ್ರಿ ನುಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಗುಂಪು ಆಟಗಳ ಸ್ಪರ್ಧೆಯ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಸಮಾರೋಪ ಭಾಷಣದಲ್ಲಿ ಮಾತನಾಡಿದರು. ಪಿ.ಆರ್ .ಎನ್. ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಅನ್ನಪೂರ್ಣ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗುಂಪು ಆಟಗಳ ಸಮಾರೋಪ ಸಮಾರಂಭ ನಡೆಯಿತು.
ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರು ಶೈಲೇಶ್ ಕಿಣಿ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಅಧ್ಯಕ್ಷರು ಪಾಂಡುರಂಗ ಪೈ ಸಿದ್ಧಾಪುರ , ಕಾರ್ಯದರ್ಶಿ ಮಹೇಶ್ ಹೈಕಾಡಿ, ಅಮೃತ ಭಾರತಿ ಟ್ರಸ್ಟ್ ನ ಸದಸ್ಯರು ಶ್ರೀ ಲಕ್ಷ್ಮಣ್ ಭಟ್ ಶಿವಪುರ,ಜಿಲ್ಲಾ ಶಾರೀರಿಕ ಪ್ರಮುಖ್ ವಿಜಯ ಕುಮಾರ್ ಶೆಟ್ಟಿ, ಜಿಲ್ಲಾ ಕ್ರೀಡಾಕೂಟ ಪ್ರಮುಖ್ ಶ್ರೀಮತಿ ಉಷಾ ಶೆಟ್ಟಿ , ಮುಖ್ಯ ಅತಿಥಿ ಚೇತನ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರು ಜ್ಯೋತಿ ಹೈಸ್ಕೂಲ್ ಅಜೆಕಾರ್,ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಅನಿತಾ, ಅಪರ್ಣಾ ಆಚಾರ್ , ಶಕುಂತಲಾ ಉಪಸ್ಥಿತರಿದ್ದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವಿಜಯ ಕುಮಾರ ಶೆಟ್ಟಿ ಸ್ವಾಗತಿಸಿ, ನಿಶಾನ್ ಶೆಟ್ಟಿ ವಂದಿಸಿದರು , ಪ್ರವೀಣ್ ಹೆಗ್ಡೆ ಬಹುಮಾನಿತರ ಪಟ್ಟಿ ವಾಚಿಸಿದರು, ಗಣಿತ ಮಾತಾಜಿ ಶ್ರೀಮತಿ ಪ್ರಜಾತ ನಿರೂಪಿಸಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಾದ ಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು , ಸರಸ್ವತಿ ವಿದ್ಯಾಲಯ ಸಿದ್ದಾಪುರ, ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ, ಅಮೃತ ಭಾರತಿ ವಿದ್ಯಾಲಯ ರಾಜ್ಯ ಪಠ್ಯಕ್ರಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗ ಹೆಬ್ರಿ, ನಚಿಕೇತ ವಿದ್ಯಾಲಯ ಬೈಲೂರು , ಅಮೃತ ಭಾರತಿ ವಿದ್ಯಾ ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗ ಹೆಬ್ರಿ , ಶ್ರೀರಾಮ ವಿದ್ಯಾಕೇಂದ್ರ ಕೋಡಿ, ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಅಂಪಾರು ಸಂಸ್ಥೆಗಳಿಂದ 492 ಸ್ಪರ್ಧಾಳುಗಳು ಭಾಗವಹಿಸಿದರು. ಸಮಗ್ರ ಪ್ರಶಸ್ತಿಯನ್ನು ಪಿ.ಆರ್. ಎನ್. ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹೆಬ್ರಿ ವಿದ್ಯಾರ್ಥಿಗಳು ಪಡೆದರು.