Sunday, July 14, 2024
Homeರಾಜ್ಯಜೂ.17 ರಂದು ಕ.ಸು.ಸಂ.ಪರಿಷತ್ತಿನಿಂದ “ಸ್ವರಾಭರಣ” ಸ್ಥಳೀಯ ಕವಿಗಳ ಪದ್ಯಗಾಯನ ಸಮಾರೋಪ ಸಮಾರಂಭ

ಜೂ.17 ರಂದು ಕ.ಸು.ಸಂ.ಪರಿಷತ್ತಿನಿಂದ “ಸ್ವರಾಭರಣ” ಸ್ಥಳೀಯ ಕವಿಗಳ ಪದ್ಯಗಾಯನ ಸಮಾರೋಪ ಸಮಾರಂಭ

ದಾವಣಗೆರೆ: ಕರ್ನಾಟಕ ಸುಗಮ ಸಂಗೀತ ಪರಿಷತ್, ಅನುಶ್ರೀ ಸಂಗೀತ ಶಾಲೆ ಹಾಗೂ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಸಂಯುಕ್ತಾಶ್ರಯುದಲ್ಲಿ ಜೂನ್ 17ರ ಸೋಮವಾರ ಸಂಜೆ 5 ಗಂಟೆಗೆ ದಾವಣಗೆರೆಯ ವಿದ್ಯಾನಗರ ರಸ್ತೆಯಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ಸ್ಥಳೀಯ ಕವಿಗಳ ಪದ್ಯಗಾಯನ “ಸ್ವರಾಭರಣ”ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಲಾಕುಂಚ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಕಾರ್ಯಾಧ್ಯಕ್ಷರು, ಖ್ಯಾತ ಗಾಯಕರಾದ ಬೆಂಗಳೂರಿನ ಡಾ. ಕಿಕ್ಕೇರಿ ಕೃಷ್ಣಮೂರ್ತಿ ವಹಿಸಿಕೊಳ್ಳಲಿದ್ದಾರೆ. ದಾವಣಗೆರೆಯ ಅನುಶ್ರೀ ಸಂಗೀತಶಾಲೆಯ ಸಂಸ್ಥಾಪಕರಾದ ವಿದುಷಿ ವೀಣಾ ಸದಾನಂದ ಹೆಗಡೆಯವರು ಸ್ಥಳೀಯ ಕವಿ, ಕವಯತ್ರಿಯರ ಕವನಗಳಿಗೆ ರಾಗ ಸಂಯೋಜಿಸಿ, ಹಾಡಿ “ಸ್ವರಾಭರಣ”ದ ಪ್ರಸ್ತುತಿ ವ್ಯಕ್ತಪಡಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ. ವಾಮದೇವಪ್ಪ, ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಬೆಂಗಳೂರಿನ ಪ್ರವೀಣ್ ಬಿ.ವಿ., ಖಜಾಂಚಿಯಾದ ಪ್ರಶಾಂತ ಉಡುಪ, ಪರಿಷತ್ತಿನ ಮೈಸೂರು ಜಿಲ್ಲಾಧ್ಯಕ್ಷರಾದ ನಾಗರಾಜ್ ವಿ.ಬೈರಿ, ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶಾಂತಾ ಎಸ್. ಶೆಟ್ಟಿ, ಮಂಡ್ಯ ಜಿಲ್ಲಾಧ್ಯಕ್ಷರಾದ ಡೇವೀಡ್ ಪ್ರತಿಭಾಂಜಲಿ ಆಗಮಿಸಲಿದ್ದಾರೆ ಎಂದು ಕಲಾಕುಂಚ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವ್ಯಿಕ್ತಪಡಿಸಿದ್ದಾರೆ. ಸಾಹಿತ್ಯ, ಸಂಗೀತಸಕ್ತರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಅಪರೂಪ ಹೊಸ ಪರಿಕಲ್ಪನೆಯ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಕವಿ, ಹವ್ಯಾಸಿ ಗಾಯಕರಾದ, ಕಲಾಕುಂಚ ಸಂಸ್ಥಾಪಕರು, ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಜಿಲ್ಲಾಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular