ಉದ್ಯಮದಲ್ಲಿ ತಾಳ್ಮೆ ಇರಲಿ: ಜೋಸೆಫ್ ಡಿ. ಅಲ್ಮೆಡ,
ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಹಪ್ಪಳ ಉಪ್ಪಿನಕಾಯಿ ಮತ್ತು ಮಸಾಲ ಪುಡಿಗಳ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀ. ಜೋಸೆಫ್ ಡಿ. ಅಲ್ಮೆಡ, ಮಾಲಕರು. ಜೋಸ್ನ ಪಿಕ್ಕಲ್ಸ್, ಸಾಸ್ತಾನ, ನಿರ್ದೇಶಕರು, ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಬ್ರಹ್ಮಾವರ ಅವರು ಹಪ್ಪಳ ಉಪ್ಪಿನಕಾಯಿ ಮತ್ತು ಮಸಾಲ ಪುಡಿಗಳ ತಯಾರಿಕೆ ತರಬೇತಿಯ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಅವರು ಪ್ರಾರಂಭದಲ್ಲಿ 5kg ಉಪ್ಪಿನಕಾಯಿ ತಯಾರು ಮಾಡಿ ದೂರದ ಊರಿನ ಮಾರುಕಟ್ಟೆಗೆ ಹೋಗಿ ಉತ್ಪನ್ನವನ್ನು ಮಾರಾಟ ಮಾಡಿ, ಉದ್ಯಮವನ್ನು ಮುನ್ನಲೆಗೆ ತಂದಿರುವ ವಿಷಯವನ್ನು ಪ್ರಸ್ತಾಪಿಸಿದರು. 34 ವರುಷಗಳ ಅನುಭವವನ್ನು ಪಡೆಯುವಾಗ ಸಾಕಷ್ಟು ತೊಂದರೆಗಳು, ಹಣಕಾಸಿನ ತೊಂದರೆಗಳು ಆಗಿವೆ. ಅವುಗಳನ್ನು ಬಹಳ ಚಾಕಚಕ್ಯತೆಯಿಂದ ಪರಿಹಾರವನ್ನು ಕಂಡುಕೊಳ್ಳುವುದರ ಮುಖಾಂತರ ಉದ್ಯಮದಲ್ಲಿ 34 ವರ್ಷಗಳ ಕಾಲ ನೆಲೆಯೂರಲು ಸಾಧ್ಯವಾಗಿದೆ. ಹಾಗಾಗಿ ಪ್ರಾರಂಭದಲ್ಲಿ ಸ್ವಲ್ಪ ಕಷ್ಟವೆನಿಸಿದರು, ದೃಢ ನಿರ್ಧಾರದಿಂದ ಹಿಂದೆ ಸರಿಬೇಡಿ. ಉದ್ಯಮದಲ್ಲಿ ತಾಳ್ಮೆ ಇರಲಿ, ಸಮಾಜದಲ್ಲಿ ಯಶಸ್ವಿ ಉದ್ಯಮಿಗಳಾಗಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಸಲಕರಣೆಗಳನ್ನು ವಿತರಿಸಿ, ಶುಭ ಹಾರೈಸಿದರು.

ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ನಿರ್ದೇಶಕರಾದ ಡಾ . ಬೊಮ್ಮಯ್ಯ. ಎಂ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸಂಸ್ಥಯಿಂದ ಯಾವೆಲ್ಲ ರೀತಿಯಲ್ಲಿ ವಿಷಯಗಳು, ಮಾರ್ಗದರ್ಶನವನ್ನು ನೀಡಿದ್ದೇವೆ ಹಾಗೂ ಮಾರುಕಟ್ಟೆಯ ವ್ಯವಸ್ಥೆಯನ್ನು ಕ್ಷೇತ ಭೇಟಿಯ ಅವಧಿಯಲ್ಲಿ ನಿಮಗೆ ವಿವರವಾಗಿ ತಿಳಿಸಿದ್ದೇವೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ಪಡೆದುಕೊಂಡಿದ್ದೀರಿ. ಯಾವುದೇ ಅಂಜಿಕೆಯಿಲ್ಲದೆ ಸ್ವಉದ್ಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆರ್ಥಿಕವಾಗಿ ಸಧೃಢರಾಗಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀಮತಿ. ಲೀನಾ ಡಿ ಅಲ್ಮೆಡಾ, ಸಹ ಮಾಲಕರು , ಜೋಸ್ನ ಪಿಕ್ಕಲ್ಸ್, ಸಾಸ್ತಾನ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಉಪನ್ಯಾಸಕಿ ಶ್ರೀಮತಿ. ಚೈತ್ರ . ಕೆ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀ. ಸಂತೋಷ್ ವಂದಿಸಿದರು.

