” ಕನ್ನಡ ಗ್ರಾಮ – ಕಾಸರಗೋಡು ಕನ್ನಡಿಗರ ಸಾಂಸ್ಕೃತಿಕ -ಸಾಹಿತ್ಯ ಕೇಂದ್ರ ” ಗಡಿನಾಡು ಕಾಸರಗೋಡಿನಲ್ಲಿ ನಡೆಯುತ್ತಿರುವ ಕನ್ನಡ ಚಟುವಟಿಕೆ ಇಲ್ಲಿನ ಕನ್ನಡ ಭಾಷೆ,ಸಾಹಿತ್ಯ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಆಯೋಜನೆ ಹಾಗೂ ಕನ್ನಡ ಭಾಷೆ,ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಗಡಿನಾಡಿನ ಕನ್ನಡಿಗರು ನಡೆಸುತ್ತಿರುವ ಹೋರಾಟ ಶ್ಲಾಘನೀಯವಾದದ್ದು. ಕನ್ನಡ ಗ್ರಾಮ- ಕಾಸರಗೋಡು ಕನ್ನಡಿಗರ ಸಾಂಸ್ಕೃತಿಕ -ಸಾಹಿತ್ಯ ಕೇಂದ್ರ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ , ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃತರಾದ, ಶಿಕ್ಷಣ ತಜ್ಞ ಸಿ.ಎನ್.ಅಶೋಕ್ ಅವರು ಹೇಳಿದರು.
ಕಾಸರಗೋಡು ಮಧೂರು ರಸ್ತೆಯ ಪಾರೆಕಟ್ಟೆ ಮೀಪುಗುರಿಯ ಕನ್ನಡ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ,ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ನಡೆದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸಿ,ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಯುವ ಹಂತದಲ್ಲೇ ಮಕ್ಕಳಿಗೆ ಸಂಸ್ಕಾರ ತುಂಬುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ತಾಲೂಕು,ಜಿಲ್ಲಾ ಮಟ್ಟದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿಯೂ ಮಕ್ಕಳ ಸಾಹಿತ್ಯ ಪರಿಷತ್ತು ಈಗಾಗಲೇ 10 ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡಲಾಗಿದೆ.
ಕರ್ನಾಟಕ ಸರಕಾರದಿಂದ ಯಾವುದೇ ಧನ ಸಹಾಯ ಪಡೆಯದೆ ಸಮ್ಮೇಳನ ನಡೆಸುತ್ತಿರುವುದು ಪರಿಷತ್ತಿನ ಹೆಗ್ಗಳಿಕೆಯಾಗಿದೆ. ಕಳೆದ ವರ್ಷ ದೇಶದ ರಾಜಧಾನಿ ದೆಹಲಿಯಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಮೊಟ್ಟಮೊದಲ ಐತಿಹಾಸಿಕ ಮಕ್ಕಳ ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದು ಹೆಮ್ಮೆ.ಇಂತಹ ಸಮ್ಮೇಳನಗಳು ಇನ್ನು ಎಲ್ಲಾ ರಾಜ್ಯ ಹೊರ ರಾಜ್ಯ ಜಿಲ್ಲೆಗಳಲ್ಲಿ ಸಂಘಟಿಸಲು ನಿಮ್ಮೆಲ್ಲರ ಸಹಕಾರ ಅಗತ್ಯ. ಕೇರಳದಲ್ಲಿ ಕನ್ನಡಿಗರು ಅಲ್ಪಸಂಖ್ಯಾಕರಾಗಿದ್ದರೂ, ಕನ್ನಡಿಗರೆಲ್ಲರೂ ಜೊತೆಗೂಡಿ ಶಿವರಾಮ ಕಾಸರಗೋಡು ನೇತೃತ್ವದಲ್ಲಿ ಕನ್ನಡ ಕಟ್ಟುವ ಬೆಳೆಸುವ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹವೆಂದರು.
ಶಾಲಾ ಕಾಲೇಜಿನಲ್ಲಿರುವ ಪ್ರತಿಭಾವಂತ ಮಕ್ಕಳನ್ನು ಗುರುತಿಸುವುದು ಮತ್ತು ಮಕ್ಕಳಲ್ಲಿನ ಸಾಹಿತ್ಯ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಮಕ್ಕಳ ಸಾಹಿತ್ಯ ಸಮ್ಮೇಳನ ಔಚಿತ್ಯ ಪೂರ್ಣವಾಗಿದೆ. ಎಂದು ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ನಡೆದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹರ್ಷಿತಾ. ಪಿ.(9ನೇ ತರಗತಿ, ಶ್ರೀ ಭಾರತಿ ವಿದ್ಯಾ ಪೀಠ ಬದಿಯಡ್ಕ) ಹೇಳಿದರು.
ಗಡಿನಾಡು ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಮತ್ತು ಕೇರಳ- ಕರ್ನಾಟಕ ಮಕ್ಕಳ ಉತ್ಸವದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದ ಅವರು ದೂರದ ಕರ್ನಾಟಕ ರಾಜ್ಯದ ಹಾಸನ ಜೆಲ್ಲೆಯ ಚನ್ನರಾಯಪಟ್ಟಣದಿಂದ ಆಗಮಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯದಲ್ಲಿ ಕನ್ನಡ ಸಾಹಿತ್ಯ,ಸಂಸ್ಕೃತಿಯನ್ನು ಪ್ರಸರಿಸುವ ಮೂಲಕ ಕೇರಳದ ಕನ್ನಡಿಗರ ಮನಸನ್ನು ಬೆಸೆಯುವ ಕೆಲಸ ಮಾಡಿದೆ. ಮಕ್ಕಳಾದ ನಾವುಗಳು ನಡೆ,ನುಡಿ, ಆಚಾರ,ವಿಚಾರ, ಸಂಸ್ಕೃತಿಯನ್ನು ಸಂಭ್ರಮಿಸುವ ಮೂಲಕ ಸಮಾಜದಲ್ಲಿ ದೊಡ್ಡವರು ಚಿಕ್ಕವರಿಗೆ ಗೌರವ ನೀಡುವುದನ್ನು ಕಲಿತು ಸಮಾಜದ ಆಸ್ತಿಯಾಗಿ ಹೊರಹೊಮ್ಮಲು ಈ ಮಕ್ಕಳ ಸಾಹಿತ್ಯ ಸಮ್ಮೇಳನ ಮಾರ್ಗ ಸೂಚಿಯಾಗಿದೆ ಎಂದರು.
ಸಮ್ಮೇಳನದ ಸಹ ಅಧ್ಯಕ್ಷರಾದ ಕು. ಶಿವಾನಿ ಕೂಡ್ಲು (10ನೇ ತರಗತಿ ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ಕೂಡ್ಲು )ಅವರು ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಗಡಿನಾಡಿನಲ್ಲಿ ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿದೆ ಎಂದರು. ಈ ಐತಿಹಾಸಿಕ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಕೇರಳ- ಕರ್ನಾಟಕ ಮಕ್ಕಳ ಉತ್ಸವವನ್ನಾಗಿ ಸಂಭ್ರಮಿಸಲಾಗಿದೆ. ಇದು ಕಾಸರಗೋಡು ಕನ್ನಡಿಗರು ಅಭಿಮಾನ ಪಡುವಂತಾಗಿದೆ ಎಂದರು.
ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಮುಂಚಿತವಾಗಿ ಕಾಸರಗೋಡು ಮೀಪುಗುರಿಯ ಕೂಡ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸರದಿಂದ ಭವ್ಯ ಸಾಂಸ್ಕೃತಿಕ ಮೆರವಣಿಗೆಯು ಕನ್ನಡ ಗ್ರಾಮದ ಸಮ್ಮೇಳನದ ನಗರದವರೆಗೆ ನಡೆಯಿತು. ಸಮ್ಮೇಳನದ ಸರ್ವಾಧ್ಯಕ್ಷರಾದ ಕು. ಹರ್ಷಿತಾ.ಪಿ, ಸಹ ಅಧ್ಯಕ್ಷರಾದ ಕು.ಶಿವಾನಿ ಕೂಡ್ಲು ರಾಜ್ಯಮಟ್ಟದ ವಿದ್ಯಾರ್ಥಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ .ಕೆ. ಆರ್. ಸ್ವಾತಿ ಕಾರ್ಯಾಡು , ಸಹ ಅಧ್ಯಕ್ಷತೆ ವಹಿಸಿದ ಪ್ರಣತಿ ಆರ್. ಗಡಾದ ರಾಜ್ಯಮಟ್ಟದ ಸಣ್ಣ ಕಥಾ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಆಶ್ರಯ ಎಸ್. ಬೇಳ ಹಾಗೂ ಮಕ್ಕಳು, ಶಾಲಾ ಕಾಲೇಜು ವಿದ್ಯಾರ್ಥಿಗಳು,ಕವಿಗಳು, ಸಾಹಿತಿಗಳು,ಲೇಖಕರು, ಮಾಧ್ಯಮದವರು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸಿ.ಎನ್ ಅಶೋಕ್,ವಿವಿಧ ಜಿಲ್ಲಾ ಅಧ್ಯಕ್ಷರು,ಪದಾಧಿಕಾರಿಗಳು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ಪ್ರತಿನಿಧಿಗಳಾದ ಸುಮಾರು 200 ಮಂದಿ ಸಾಹಿತ್ಯ ಸಾಂಸ್ಕೃತಿಕ ನಿಯೋಗದ ಸದಸ್ಯರು, ಕಾಸರಗೋಡು ಪ್ರದೇಶದ ವಿವಿಧ ಸಂಘ ಸಂಸ್ಥೆಗಳು, ಶಾಲಾ,ಕಾಲೇಜಿನ ವಿದ್ಯಾರ್ಥಿಗಳು,ಅಧ್ಯಾಪಕರು, ಹೆತ್ತವರು,ಪೋಷಕರು ಸುಮಾರು 600 ಕ್ಕೂ ಅಧಿಕ ಪ್ರತಿನಿಧಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ – ಕೇರಳ ರಾಜ್ಯ ಸಹಿತ ಕಾಸರಗೋಡು ಜಿಲ್ಲೆಯ ಸುಮಾರು 50ಕ್ಕೂ ಅಧಿಕ ವಿವಿಧ ಶಾಲಾ ಕಾಲೇಜಿನಿಂದ ವಿದ್ಯಾರ್ಥಿ, ಅಧ್ಯಾಪಕರ ಪ್ರತಿನಿಧಿಗಳು ಒಂದು ದಿನದಲ್ಲಿ ಸುಮಾರು 1500 ಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿರುವುದು ಈ ಸಮ್ಮೇಳನದ ಹೆಗ್ಗಳಿಕೆಯಾಗಿದೆ
ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಕಾಸರಗೋಡು ನಗರಸಭಾ ಕೌನ್ಸಿಲರ್ ಶ್ರೀಮತಿ ಶಾರದಾ ಜೆ. ಪಿ. ನಗರ, ಪರಿಷತ್ತು ಧ್ವಜಾರೋಹಣವನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ನೆರವೇರಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸಿ.ಎನ್ ಅಶೋಕ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರವಣಬೆಳಗೊಳ ಶಾಸಕ ಸಿ. ಎನ್ ಬಾಲಕೃಷ್ಣ ಹಾಗೂ ಶ್ರೀಮತಿ ಕುಸುಮ ಬಾಲಕೃಷ್ಣ ದಂಪತಿಗಳು ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು. ಕಾಸರಗೋಡು ಕನ್ನಡ ಗ್ರಾಮ – ನಮ್ಮ ಗ್ರಾಮ ವರ್ಷಾಚರಣೆಯ ಪ್ರಯುಕ್ತ ಪ್ರಕೃತಿ ಉಳಿಸಿ ಬೆಳೆಸಲು ಕನ್ನಡ ಗ್ರಾಮದಲ್ಲಿ 60 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸಿ.ಎನ್ ಅಶೋಕ್ ಹಾಗೂ ವಿವಿಧ ಕ್ಷೇತ್ರದ ಸಾಧಕರಾದ 60 ಮಂದಿ ಮುಖ್ಯ ಅತಿಥಿಗಳು ಗಿಡಗಳನ್ನು ನೆಟ್ಟು ಚಾಲನೆ ನೀಡಿದರು. ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಲೇಖನ,ಪುಸ್ತಕ ಹಾಗೂ ಪೆನ್ನು ಒಳಗೊಂಡ ಕಿಟ್ ವಿತರಣಾ ಕಾರ್ಯಕ್ರಮವನ್ನು ಖ್ಯಾತ ಪರಿಸರ ತಜ್ಞ ,ಬೆಂಗಳೂರಿನ ಪರಿಸರ ನಿಸರ್ಗ ಸಂರಕ್ಷಣಾ ಸಂಸ್ಥೆಯ ಕಾರ್ಯದರ್ಶಿ ಈಶ್ವರ ಪ್ರಸಾದ್ ಉದ್ಘಾಟಿಸಿದರು ಕಲಾ ಪ್ರದರ್ಶನವನ್ನು ಸುಳ್ಯ ಸಂಪಾಜೆಯ ತೆಕ್ಕಿಲ್ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ವಿದ್ಯಾ ಸಂಸ್ಥೆಯ ಅಧ್ಯಕ್ಷ ಟಿ. ಎಂ ಶಹೀದ್ ಉದ್ಘಾಟಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೆಂಗಳೂರಿನ ವಿ.ಕೆ.ಎಂ ಕಲಾವಿದರು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿ.ಎಂ ತಿಮ್ಮಯ್ಯ ಉದ್ಘಾಟಿಸಿದರು ತೆಂಕುತಿಟ್ಟು ಯಕ್ಷಗಾನ ವೇಷ ಭೂಷಣ ಪ್ರದರ್ಶನವನ್ನು ಡಾ. ಕೆ. ಎನ್ ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದರು. ಕೃಷಿ, ಹಣ್ಣು ಹಂಪಲು ಪ್ರದರ್ಶನವನ್ನು ಲವ ಕೆ. ಮೀಪುಗುರಿ ಉದ್ಘಾಟಿಸಿದರು. ಗ್ರಾಮೀಣ ಆಹಾರ ಮೇಳವನ್ನು ರಾಮ ಪ್ರಸಾದ್ ಕಾಸರಗೋಡು ಉದ್ಘಾಟಿಸಿದರು. ಪುಸ್ತಕ ಪ್ರದರ್ಶನವನ್ನು ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಉದ್ಘಾಟಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳ ನೊಂದಾವಣೆ ಕಾರ್ಯಾಲಯವನ್ನು ರಮೇಶ ಎಂ.ಬಾಯಾರು ಉದ್ಘಾಟಿಸಿದರು. ವಿವಿಧ ಕ್ಷೇತ್ರಗಳ ಪ್ರತಿನಿಧಿಗಳ ನೊಂದಾವಣೆಯ ಕಾರ್ಯಾಲಯವನ್ನು ಕೆ.ಸತೀಶ ಮಾಸ್ತರ್ ಕೂಡ್ಲು ಉದ್ಘಾಟಿಸಿದರು.
ಮಹಾರಾಷ್ಟ್ರ ಥಾಣೆಯ ಶ್ರೀ ಶಕ್ತಿ ಫೌಂಡೇಶನ್ ಸ್ವಾಪರಾಧ್ಯಕ್ಷೆ ಶಾಲಿನಿ ಸತೀಶ್ ಶೆಟ್ಟಿ ಥಾಣೆ ಇವರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ “ಕರಾವಳಿ ಪ್ರತಿಭಾ ಶಾಲಿನಿ ರಾಷ್ಟ್ರೀಯ ಪ್ರಶಸ್ತಿ”ಯನ್ನು ಪ್ರದಾನ ಮಾಡಲಾಯಿತು. ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಅನುಭವಾಮೃತ ನುಡಿಯನ್ನು ಹೇಳಿದರು.ಮುಖ್ಯ ಅತಿಥಿಯಾಗಿ ಡಾ. ಹರಿಕಿರಣ್ ಬಂಗೇರ ಅಧ್ಯಕ್ಷರು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕಾಸರಗೋಡು, ಗೋಪಾಲಕೃಷ್ಣ ಕೂಡ್ಲು, ಅಧ್ಯಕ್ಷರು,ಮಧೂರು ಗ್ರಾಮ ಪಂಚಾಯತು ಮಾಜಿ ಕೌನ್ಸಿಲರ್ ಶಂಕರ್ ಕೆ. ಜೆ. ಪಿ ನಗರ,ಕಾಸರಗೋಡು ನಗರ ಸಭೆಯ ಪ್ರತಿಪಕ್ಷ ನಾಯಕ ರಮೇಶ ಪಿ,ಕೌನ್ಸಿಲರ್ ಕೆ.ವರಪ್ರಸಾದ ಕೋಟೆಕಣಿ, ಹೇಮಲತಾ ಶಾರದಾ ಬಿ,ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಸಂಜೀವ ದುಮಕನಾಳ ಧಾರವಾಡ. ಮಲ್ಲಿಗೆ ಸುಧೀರ್ ಚಿಕ್ಕಮಗಳೂರು,ಯೋಗೀಶ್ ಸಹ್ಯಾದ್ರಿ ಚಿತ್ರದುರ್ಗ, ಕಾ. ಹು. ಜಾನ್ ಪಾಶಾ ಕೋಲಾರ, ಡಾ. ರಾಜೇಂದ್ರ ಎಸ್. ಗಡಾದ , ಡಾ.ಡಿ. ಫ್ರಾನ್ಸಿಸ್ ಕ್ಸೆವಿಯಾರ್ ಧಾವಣಗೆರೆ, ಡಾ. ಲವ ಕುಮಾರ್ ಪಾಂಡವಪುರ,ಮೈಸೂರು ಗ್ರಾಮೀಣ ಜಿಲ್ಲೆ, ವೆಂಕಟೇಶ್ ಬಡಿಗೇರ್ ವಿಜಯ ನಗರ, ಡಾ. ಮಲಕಪ್ಪ ಅಲಿಯಾಸ್ ಮಹೇಶ್ ಬೆಂಗಳೂರು, ವೆಂಕಟೇಶ್ ಈಡಿಗರ ಹಾವೇರಿ, ಸಿದ್ರಾಮ ಎಮ್. ನಿಲಜಗಿ, ಬೆಳಗಾವಿ,ರವಿರಾಜ್ ಸಾಗರ್ ಶಿವಮೊಗ್ಗ, ಕೆ. ಭುಜಂಗಶೆಟ್ಟಿ ಸದಸ್ಯರು ಕೇರಳ ತುಳು ಅಕಾಡೆಮಿ. ಸಾಲಿಗ್ರಾಮ ಗಣೇಶ್ ಶೆಣೈ ಸಂಸ್ಥಾಪಕರು, ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ,ಡಾ. ಧನಂಜಯ ಕುಂಬಳೆ ಕನ್ನಡ ಪ್ರಾಧ್ಯಾಪಕರು ಕನ್ನಡ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ, ಡಾ. ಸುಜಾತಾ ಎಂ. ಕನ್ನಡ ವಿಭಾಗ ಸರಕಾರಿ ಕಾಲೇಜು ಕಾಸರಗೋಡು,ಮಹಮ್ಮದ್ ಆಲಿ ಕೆ. ಪ್ರಾಂಶುಪಾಲರು ರಾಷ್ಟ್ರಕವಿ ಗೋವಿಂದ ಪೈ ಸರಕಾರಿ ಕಾಲೇಜು ಮಂಜೇಶ್ವರ,ಡಾ. ಕೆ. ಕಮಲಾಕ್ಷ ವಿದ್ಯಾನಗರ, ಡಾ. ಎನ್. ಧರ್ಮನಗೌಡ ವಿಜಯನಗರ, ಹರೀಶ ಸುಲಾಯ ಒಡ್ಡಂಬೆಟ್ಟು ಅಧ್ಯಕ್ಷರು ದ ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ವಿಶಾಲಾಕ್ಷ ಪುತ್ರಕಳ, ವಿ. ಬಿ.
ಕುಳಮರ್ವ, ಜಯಾನಂದ ಕುಮಾರ್ ಕಾಸರಗೋಡು, ಡಾ.ರಾಜೇಶ್ ಆಳ್ವ ಕೆ.ಸೋಮಶೇಖರ,ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಸಿಹಾನ ಬಿ. ಎಂ. ಉಳ್ಳಾಲ, ಪುರುಷೋತ್ತಮ ಬೊಡ್ಡನಕೊಚ್ಚಿ ,ಸಿದ್ದನಗೌಡ ಪಾಟೀಲ ಧಾರವಾಡ, ಸ್ಕಂದ ಸಿ. ಎ ಸ್. ಕಾಟುಕುಕ್ಕೆ,ದಿಯಾ ಉದಯ ಡಿ. ಯು, ಧ್ವನಿರೈ ಕೋಟೆ ಪಾಣಾಜೆ, ಸುಂದರ ಬಾರಡ್ಕ ,ಸತ್ಯನಾರಾಯಣ ಶರ್ಮಾ , ಸುಭಾಷ್ ಪೆರ್ಲ, ಪುರುಷೋತ್ತಮ ಎಂ.ನಾಯ್ಕ್ ,
ರಘು ಮೀಪುಗುರಿ, ಶ್ರೀನಿವಾಸ ರಾವ್ ಪಿ.ಬಿ. ಗಣೇಶ್ ನಾಯ್ಕ್ ಅಡ್ಕತ್ ಬೈಲು, ರವಿ ನಾಯಿಕಪು ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಪುರುಷೋತ್ತಮ ಭಟ್. ಕೆ. ಸಂಪಾದಕರು ಸಮರಸಸುದ್ದಿ ಡಾ.ಟ್.ಕಾಂ, ಮಂಜುನಾಥ ಬಾಬು ಮೈಸೂರು,ಕೆ.ವಿ. ರಮೇಶ ಕಾಸರಗೋಡು,ಹರಿಕಾಂತ ಕಾಸರಗೋಡು ಜೈ ತುಳುನಾಡು ಕಾಸರಗೋಡು,ವೆಂಕಟ್ ಭಟ್ ಎಡನೀರು, ಆನಂದ ರೈ ಅಡ್ಕಸ್ಥಳ,ವಿಜಯರಾಜ ಪುಣೆಚಿತ್ತಾಯ ಮುಳ್ಳೇರಿಯ ಉಷಾ ಸುರೇಶ್, ಶ್ರೀವಲ್ಲಿ ಎನ್. ಆರ್. ವಸಂತಿ ಎಂ, ಕೆ.ಜಿ.ಶ್ಯಾನುಬೋಗ್ ಕೆ. ಮಾಧವ ಮಾಸ್ತರ್, ಕಿರಣಪ್ರಸಾದ್ ಕೂಡ್ಲು, ದಿವ್ಯಗಟ್ಟಿ ಪರಕ್ಕಿಲ್ಲ ಭಾಗವಹಿಸಿದ್ದರು.
ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ರಾಜ್ಯಮಟ್ಟದ ವಿದ್ಯಾರ್ಥಿ ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ಕು. ಕೆ. ಆರ್. ಸ್ವಾತಿ ಕಾರ್ಯಡು ಸಹ ಅಧ್ಯಕ್ಷತೆಯನ್ನು ಕು. ಪ್ರಣತಿ ಆರ್. ಗಡಾದ ವಹಿಸಿದ್ದರು ವಿವಿಧ ಜಿಲ್ಲೆಯ 30 ಮಕ್ಕಳ ಕವಿಗಳು ಭಾಗವಹಿಸಿದ್ದರು.
ರಾಜ್ಯಮಟ್ಟದ ಸಣ್ಣ ಕಥಾಗೋಷ್ಠಿಯ ಅಧ್ಯಕ್ಷತೆಯನ್ನು ಆಶ್ರಯ ಎಸ್. ಬೇಳ ನೀರ್ಚಾಲು ವಹಿಸಿದ್ದರು. 8 ಮಂದಿ ಮಕ್ಕಳ ಕಥೆಗಾರರಿಂದ ಕಥಾ ಪ್ರಸ್ತುತಿ ನಡೆಯಿತು.
ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ 2024 ರ ಪ್ರಯುಕ್ತ ಕನ್ನಡ ಗ್ರಾಮದಲ್ಲಿ ಕಾಸರಗೋಡು ಕನ್ನಡ ಗ್ರಾಮ ಪರ್ಯಾಯ ವೇದಿಕೆ,ಕನ್ನಡ ಗ್ರಾಮದ ಮನೆ ಅಂಗಳದಲ್ಲಿ ಮಕ್ಕಳಿಗಾಗಿ ಪೆನ್ಸಿಲ್ ಡ್ರಾಯಿಂಗ್, ರಸಪ್ರಶ್ನೆ, ಏಕಾಪಾತ್ರ ಅಭಿನಯ, ಛದ್ಮವೇಷ, ಮಕ್ಕಳಿಂದ ಸಣ್ಣ ಕಥೆ,ಕನ್ನಡ ಪತ್ರಿಕೆ ಓದುವ ಸ್ಪರ್ಧೆಯನ್ನು ನಡೆಸಲಾಯಿತು. ಸುಮಾರು 100 ಕ್ಕೂ ಅಧಿಕ ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳಾಗಿ ಭಾಗವಹಿಸಿದ್ದರು. ಕನ್ನಡ ಗ್ರಾಮದ ಸಾಂಸ್ಕೃತಿಕ ಭವನದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘ,ಎಸ್.ವಿ.ಟಿ.ರಸ್ತೆ, ಕಾಸರಗೋಡು ಇವರಿಂದ ತೆಂಕುತಿಟ್ಟು ಯಕ್ಷಗಾನ ವೇಷಭೂಷಣ ಪ್ರದರ್ಶನ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಕಾಸರಗೋಡು ಜಿಲ್ಲೆಯ ಶ್ರೀ ಶಕ್ತಿ ಬಾಲ ವೃಂದ ಮಕ್ಕಳ ಕುಣಿತ ಭಜನಾ ಸಂಘ ಉಳಿಯತ್ತಡ್ಕ ಮಧೂರು, ಹಾಗೂ ಶ್ರೀರಾಮ ಬಾಲಗೋಕುಲ ಕುಣಿತ ಭಜನಾ ತಂಡ ಗೋರಿಗದ್ದೆ, ಅಡೂರು ಇವರಿಂದ ಮಕ್ಕಳ ಕುಣಿತ ಭಜನೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮನಶಾಂತಿಗಾಗಿ – ಹಾಡುವ ಮೂಲಕ 2 ವಿಶ್ವ ದಾಖಲೆ ಮಾಡಿದ ಗಂಗಾಧರ ಗಾಂಧಿ,ರಾಣಿ ಪುಷ್ಪಲತಾದೇವಿ ಮತ್ತು ವರ್ಷ ಇವರಿಂದ ಕನ್ನಡ ಗೀತ ಗಾಯನ ನಡೆಯಿತು.
ವಿದ್ಯಾ ರಶ್ಮಿ ಪ್ರೈಮರಿ ಶಾಲೆ ವಿದ್ಯಾಗಂಗೋತ್ರಿ ಸವಣೂರು ಪುತ್ತೂರು ,ಜಿ. ವಿ. ಎಚ್. ಎಸ್ ಎಸ್. ಕಾಸರಗೋಡು ಎಚ್. ಎಚ್. ಎಸ್. ಸಿ. ಬಿ. ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆ,ಬಿ. ವಿ. ಆರ್. ಎಸ್. ಎಸ್. ಬೋವಿಕ್ಕಾನ, ಕಾಸರಗೋಡು,ಸಂಜೀವ ದುಮುಕನಾಳ ಧಾರವಾಡ ಜಿಲ್ಲೆ ಮತ್ತು ತಂಡದವರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯಾ, ಕು. ಸ್ಪಂದನ ಎಂ. ಕಡಲಿ, ಕು. ಲೇಖನ ರಾಣಿಗೇರ್ ಧಾರವಾಡ ಜಿಲ್ಲೆ, ಶ್ರೀ ಶಕ್ತಿ ಬಾಲವೃಂದ, ಉಳಿಯತಡ್ಕ ಸರಕಾರಿ ಹೈಯರ್ ಸೆಕೆಂಡರಿ ಮಹಿಳಾ ಶಾಲೆ ಕಾಸರಗೋಡು, ಶ್ರೀ ಗೋಪಾಲಕೃಷ್ಣ ಹೈ ಸ್ಕೂಲ್ ಕೂಡ್ಲು ಬಿ. ಇ. ಎಂ. ಹೈಸ್ಕೂಲ್ ಕಾಸರಗೋಡು, ಮಹಾವಿದ್ಯಾದಾಯನಿ ಫೌಂಡೇಶನ್ -ಅಡ್ಕತ್ತ ಬೈಲು ಇವರಿಂದ -ಸಮೂಹ ಗಾಯನ ಸಮೂಹ ನೃತ್ಯ, ಜಾನಪದ ನೃತ್ಯ,ಯೋಗಾಸನ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭವು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಧ್ಯಕ್ಷ ಸಿ. ಎನ್. ಅಶೋಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಆಯಿಷಾ ಎ. ಎ. ಪೆರ್ಲ ಸಮಾರೋಪ ಭಾಷಣ ಮಾಡಿದರು .ಡಾ.ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ ಅನಿಷ್ ಪಿಲಿಕುಂಜೆ ಅವರಿಗೆ ಅಭಿನಂದಿಸಲಾಯಿತು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮಹಿಳಾ ಕಾರ್ಯದರ್ಶಿ ಶ್ರೀಮತಿ ನೀಲಾ ನಾಗೇಶ್ ಚನ್ನರಾಯಪಟ್ಟಣ ಪ್ರಸ್ತಾವನೆಗೈದರು. ಕಾಸರಗೋಡು ಐ. ಎಂ. ಎ. ಅಧ್ಯಕ್ಷ ಡಾ. ಹರಿಕಿರಣ್ ಬಂಗೇರ ಮುಖ್ಯ ಅತಿಥಿಯಾಗಿದ್ದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಕೃತಜ್ಞತಾ ನುಡಿಗಳನ್ನಾಡಿದರು. ಕೆ.ಜಗದೀಶ ಕೂಡ್ಲು,ಕೆ. ಗುರುಪ್ರಸಾದ ಕೋಟೆ ಕಣೆ, ದಿವಾಕರ ಪಿ. ಅಶೋಕನಗರ ಕಾವ್ಯ ಕುಶಲ ಕನ್ನಡ ಗ್ರಾಮ, ಶುಭಾಷ್ ಪೆರ್ಲ, ಕ್ರಪಾ ನಿಧಿ, ಅನುಷಾ ಕುಶಲ ಕುಮಾರ, ರಾಧಾ ಶಿವರಾಮ, ಸವಿತಾ ಕಿಶೋರ್ ಕನ್ನಡ ಗ್ರಾಮ, ಸುಚಿತಾ ಎಸ್, ಬಿ. ಸತೀಶ ಕೂಡ್ಲು,ಶ್ರೀಕಾಂತ ಕಾಸರಗೋಡು, ಕಿಶೋರ್ ಕುಮಾರ್ ಕನ್ನಡ ಗ್ರಾಮ ಕಾರ್ಯಕ್ರಮ ನಿರೂಪಿಸಿದರು.