Wednesday, April 23, 2025
HomeRacingಜಗತ್ತಿನ ಮೊದಲ ಸಿಎನ್‌ಜಿ ಬೈಕ್‌ | ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಬಜಾಜ್‌ ಬೈಕಿನ ವಿಶೇಷತೆಗಳು...

ಜಗತ್ತಿನ ಮೊದಲ ಸಿಎನ್‌ಜಿ ಬೈಕ್‌ | ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಬಜಾಜ್‌ ಬೈಕಿನ ವಿಶೇಷತೆಗಳು ಇಲ್ಲಿವೆ!

ಬೈಕ್‌ ಎಂದರೆ ಯಾರಿಗಿಷ್ಟವಿಲ್ಲ? ಹೇಳಿ… ಪ್ರತಿಯೊಬ್ಬ ಯುವಕನಿಗೆ ಬೈಕ್‌ ಕ್ರೇಝ್‌ ಇದ್ದೇ ಇರುತ್ತದೆ. ಬೈಕ್‌ ಹಿಡಿದು ಲಾಂಗ್‌ ಡ್ರೈವ್‌ ಹೋಗಬೇಕು ಎಂಬುದು ಎಲ್ಲರ ಕನಸು. ಹೀಗಾಗಿ ಬೈಕ್‌ಗಳು ಎಷ್ಟೇ ದುಬಾರಿಯಾದರೂ ಕೊಳ್ಳುವವರು ಇದ್ದೇ ಇರುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್‌ ಬೈಕ್‌ಗಳ ಪರ್ಯಾಯವಾಗಿ ಎಲೆಕ್ಟ್ರಿಕ್‌ ಬೈಕ್‌ಗಳು ಚಾಲ್ತಿಯಲ್ಲಿವೆ. ಇದೀಗ ಮುಂದುವರಿದು ಜನಪ್ರಿಯ ದ್ವಿಚಕ್ರ ತಯಾರಕ ಕಂಪೆನಿ ಸಿಎನ್‌ಜಿ ಚಾಲಿತ ಬೈಕ್‌ ಅನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಬೈಕ್‌ ಸದ್ಯ ಮಾರುಕಟ್ಟೆಯಲ್ಲಿರುವ ವಿವಿಧ ಆಟೊ ಮೊಬೈಲ್‌ ಕಂಪನಿಗೆ ಸೆಡ್ಡು ಹೊಡೆದಿದೆ.
ಬಜಾಜ್‌ ಕಂಪನಿ ಈ ವಿಚಾರದಲ್ಲಿ ಇದೇ ಮೊದಲ ಬಾರಿ ಹೊಸ ಕ್ರಾಂತಿ ಸೃಷ್ಟಿಸುವ ಹಂತದಲ್ಲಿದೆ. ಇದೇ ಮೊದಲ ಬಾರಿ ಸಿಎನ್‌ಜಿ ಚಾಲಿತ ಬಜಾಜ್‌ ಫ್ರೀಡಂ ಹೆಸರಿನ ಬೈಕನ್ನು ಮಾರುಕಟ್ಟೆಗೆ ಬಜಾಜ್‌ ಪರಿಚಯಿಸಿದೆ. ನೂತನ ಬೈಕ್‌ ಬೆಲೆ ಕೇವಲ 95,000 ರೂ. ಎಂದು ವರದಿಗಳು ತಿಳಿಸಿವೆ.
ನೂತನ ಬಜಾಜ್‌ ಫ್ರೀಡಂ ಸಿಎನ್‌ಜಿ ಬೈಕ್‌ 125 ಸಿಸಿ ಎಂಜಿನ್‌ ಹೊಂದಿದ್ದು, 9.3 ಬಿಎಚ್‌ಪಿ ಮತ್ತು 9.7 ಎನ್‌ಎಂ ಟಾರ್ಕ್‌ ಉತ್ಪಾದಿಸುತ್ತದೆ. ಅಚ್ಚರಿಯ ವಿಚಾರವೆಂದರೆ ಡ್ಯುಯೆಲ್‌ ಇಂಧನ ಸಾಮರ್ಥ್ಯವನ್ನು ಹೊಂದಿರುವ ಈ ಬೈಕ್‌ 2ಕೆಜಿ ಸಿಎನ್‌ಜಿ ಸಿಲಿಂಡರ್‌ ಹೊಂದಿದೆ. ಜೊತೆಗೆ 2 ಲೀಟರ್‌ ಸಹಾಯಕ ಪೆಟ್ರೋಲ್‌ ಟ್ಯಾಂಕ್‌ ಕೂಡ ಇದರಲ್ಲಿದೆ. ಈ ಬೈಕ್‌ ಫುಲ್‌ ಟ್ಯಾಂಕ್‌ನಲ್ಲಿ 330 ಕಿ.ಮೀ. ಕ್ರಮಿಸುತ್ತದೆ.
ಬಜಾಜ್​ ಫ್ರೀಡಂ ಬೈಕ್​ ಕ್ವಿಲ್ಟೆಡ್​​​ ಸೀಟ್​​, ಎಲ್​ಇಡಿ ಹೆಡ್​ಲೈಟ್​, ಡಿಜಿಟಲ್​​ ಸ್ಪೀಡೋ ಮೀಟರ್​, ಬ್ಲೂಟೂತ್​​ ಸೇರಿ ಆಧುನಿಕ ವೈಶಿಷ್ಟ್ಯವನ್ನು ಇದರಲ್ಲಿ ನೀಡಲಾಗಿದೆ. ನೂತನ ಬೈಕ್​ನ ಮುಂಭಾಗ ಟೆಲಿಸ್ಕೋಪಿಕ್​​ ಪೋರ್ಕ್​, ಮುಂಭಾಗ ಡಿಸ್ಕ್​ ಬ್ರೇಕ್​, ಹಿಂಭಾಗ ಡ್ರಮ್​ ಬ್ರೇಕ್​ ಒಳಗೊಂಡಿದೆ. ಸಿಂಗಲ್​​ ಚಾನೆಲ್ ಆಂಟಿಲಾಕ್​ ಬ್ರೇಕಿಂಗ್​ ಸಿಸ್ಟಂ ಇದರಲ್ಲಿದೆ. ಗ್ರಾಹಕರಿಗಾಗಿ ಈ ಬೈಕ್​ ಎಬೊನಿ ಬ್ಲ್ಯಾಕ್​​, ಕೆರಿಬಿಯನ್​ ಬ್ಲೂ, ಸೈಬರ್​ ವೈಟ್​, ರೇಸಿಂಗ್​ ರೆಡ್​ ಮತ್ತು ಫ್ಯೂಟರ್​​ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ.

RELATED ARTICLES
- Advertisment -
Google search engine

Most Popular