Saturday, December 14, 2024
HomeUncategorizedಕರಾವಳಿ ಹುಡುಗರ ಕರ್ಮ ವೆಬ್ ಸೀರೀಸ್ ಫಸ್ಟ್ ಲುಕ್ ಸಂದೇಶ್ ಶೆಟ್ಟಿ ಆಜ್ರಿ ಬಿಡುಗಡೆ

ಕರಾವಳಿ ಹುಡುಗರ ಕರ್ಮ ವೆಬ್ ಸೀರೀಸ್ ಫಸ್ಟ್ ಲುಕ್ ಸಂದೇಶ್ ಶೆಟ್ಟಿ ಆಜ್ರಿ ಬಿಡುಗಡೆ

ಮೊಟ್ಟ ಮೊದಲ ಬಾರಿಗೆ ಕರಾವಳಿಯ ಯುವಕರ ತಂಡ ಹೊಸತನದ ಆಯಾಮವನ್ನು ಸೃಷ್ಟಿ ಮಾಡಲು ನೈಜ್ಯ ಆಧಾರಿತ ಕಥೆಯನ್ನು ವೆಬ್ ಸೀರೀಸ್ ಮೂಲಕ ಹೇಳಲು ಹೊರಟಿದೆ. ದೀಪಾವಳಿಯ ಪ್ರಯುಕ್ತ ಇದರ ಪಸ್ಟ್ ಲುಕ್ ಪೋಸ್ಟರ್ ಅನ್ನು ಇಂದು ನಟ – ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಬಿಡುಗಡೆ ಮಾಡಿ ಯುವಕರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಕರಾವಳಿ ಭಾಗದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಎಂದೇ ಪ್ರಖ್ಯಾತಿಯಾದ ಲಕ್ಕಿ ನಾಗೇಶ್ ಚೊಚ್ಚಲ ನಿರ್ದೇಶನದ ಕರ್ಮ ವೆಬ್ ಸೀರೀಸ್ ಇದಾಗಿದೆ.

ಇದರ ನಿರ್ಮಾಣದ ಜವಾಬ್ದಾರಿಯನ್ನ ಕೆ ಆರ್ ರಾಜೇಶ್ ಭಟ್ ಮಾಡಿದ್ದು ಕಥೆ ಶರತ್ ಶೆಟ್ಟಿ ಬಿಜೂರ್ ನಿರ್ವಹಿಸಿದ್ದಾರೆ.
ಛಾಯಾಗ್ರಾಹಣ ಸನತ್ ಉಪ್ಪುಂದ ತಮ್ಮ ಕೈಚಳಕ ತೋರಿಸಿದ್ದು, ಸಂಕಲನ ಶಿವರಾಜ್ ಮೇಹು ಮಾಡಿದ್ದಾರೆ.

ಹೊಸ ಪ್ರತಿಭೆಗಳಾದ ಆಕರ್ಷ ಪೂಜಾರಿ , ಸರಿತಾ , ರಾಜೇಶ್ ಕೋಣೆ, ಗುರು ಕುಂದಾಪುರ, ಅರುಣ್ ಶೆಟ್ಟಿ ರಾಜೇಶ್ ಕೆರಗಲ್ ಬಣ್ಣ ಹಚ್ಚಿದ್ದಾರೆ. ಸದ್ಯದಲ್ಲೇ ಈ ವೆಬ್ ಸೀರೀಸ್ ಎಂಟು ಸೀರೀಸ್ ಗಳಾಗಿ ತಸ್ಮಯ್ ಪ್ರೊಡಕ್ಷನ್ ಹಾಗೂ ತಸ್ಮಯ್ ಆಡಿಯೋದಲ್ಲಿ ಬಿಡುಗಡೆಯಾಗಲಿದೆ.

RELATED ARTICLES
- Advertisment -
Google search engine

Most Popular