Wednesday, October 9, 2024
Homeಮೂಡುಬಿದಿರೆಕರಾವಳಿ ಅಭಿವೃದ್ದಿಯಿಂದಾಗಿ ಕರ್ನಾಟಕದ ಜಿಡಿಪಿಗೆ ತನ್ನದೇ ಆದ ಕೊಡುಗೆ ನೀಡಲಿದೆ: ಕ್ಯಾಪ್ಟನ್ ಬ್ರಿಜೇಶ್‌ ಚೌಟ

ಕರಾವಳಿ ಅಭಿವೃದ್ದಿಯಿಂದಾಗಿ ಕರ್ನಾಟಕದ ಜಿಡಿಪಿಗೆ ತನ್ನದೇ ಆದ ಕೊಡುಗೆ ನೀಡಲಿದೆ: ಕ್ಯಾಪ್ಟನ್ ಬ್ರಿಜೇಶ್‌ ಚೌಟ

ಜಿಲ್ಲೆಯನ್ನು ಪ್ರೀತಿಸುವವರು, ಆರಾಧಿಸುವವರು ತುಂಬಾ ಜನರಿದ್ದಾರೆ, ಯುವಕರಿಗೆ ಉದ್ಯೋಗ ಸೃಷ್ಟಿಸಲು ಹಾಗೂ ಉಧ್ಯಮ ಪ್ರಾರಂಬಿಸಲು ಜನಪ್ರತಿನಿಧಿಗಳ ಸಹಕಾರ, ವಿಷಯ ಪರಿಣಿತರ, ತಜ್ಞರ ಸಲಹೆ ಪಡೆದು ಸಮಗ್ರವಾಗಿ ವಿಕಸಿಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಅಭಿವೃದ್ದಿಪಡಿಸುತ್ತೇನೆಂದು ಪುತ್ತೂರಿನಲ್ಲಿ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಕ್ಯಾಪ್ಟನ್ ಬ್ರಿಜೇಶ್‌ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳೂರು-ಬೆಂಗಳೂರು ಸಂಪರ್ಕಿಸುವ ದೃಷ್ಠಿಯಿಂದ ರಸ್ತೆ ಅಭಿವೃದ್ದಿ ಹಾಗೂ ರೈಲುಮಾರ್ಗ ಅಭಿವೃದ್ದಿ ಪಡಿಸಲು ಶಿರಾಡಿ ಘಾಟ್‌ ರಸ್ತೆಯು ಪರಿಸರ ಮತ್ತು ಕಾನೂನಿನ ದೃಷ್ಠಿಯಲ್ಲಿ ಸವಾಲಾಗಿದೆ, ಮಂಗಳೂರು-ಬೆಂಗಳೂರು ಅಭಿವೃದ್ದಿಯಾದರೆ ಬಂದರು ಅಭಿವೃದ್ದಿಯಾಗುತ್ತದೆ. ಕರಾವಳಿ ಅಭಿವೃದ್ದಿಯಿಂದಾಗಿ ಕರ್ನಾಟಕದ ಜಿಡಿಪಿಗೆ ತನ್ನದೇ ಆದ ಕೊಡುಗೆ ನೀಡಲಿದೆ. ದೃಷ್ಠಿಯಿಂದ ಕನಸಿದೆ ಎಂದರು.

ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ದೇವಾಲಯಗಳನ್ನು ಹೊಂದಿ ವಿಶೇಷವಾಗಿರುವ ಮಾದರಿಯ ದಕ್ಷಿಣ ಕನ್ನಡ ಜಿಲ್ಲೆಯನ್ನು ಜಗತ್ತಿಗೆ ಹಾಗೂ ದೇಶಕ್ಕೆ ಪರಿಚಯಿಸುವ ಅಗತ್ಯವನ್ನು ಒತ್ತಿ ಹೇಳಿದರು, ಪರಿಸರಕ್ಕೆ ಹಾನಿಯಾಗದಂತೆ ಇಕೋ ಟೂರಿಸಮ್‌ ಮತ್ತು ಟೆಂಪಲ್‌ ಟೂರಿಸಮ್‌ ಅನ್ನು ಅಭಿವೃದ್ದಿಪಡಿಸುವುದರಿಂದ ಜಿಲ್ಲೆ ಹೆಚ್ಚು ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ ಎಂದು ಕ್ಯಾಪ್ಟನ್ ಬ್ರಿಜೇಶ್‌ ಚೌಟ ಅಭಿಪ್ರಾಯ ವ್ಯಕ್ತಪಡಿಸಿದರು.

ಮೈಸೂರು-ಕೊಡಗು ಸಂಸದರಾದ ಪ್ರತಾಪ್‌ ಸಿಂಹ, ಸಂಸದರಾದ ಶ್ರೀ ನಳೀನ್‌ ಕುಮಾರ್‌ ಕಟೀಲ್‌, ಶಾಸಕ ಹರೀಶ್ ಪೂಂಜ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಅರುಣ್‌ ಕುಮಾರ್ ಪುತ್ತಿ, ರಾಧಕೃಷ್ಣ ಆಳ್ವ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್,‌ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪಕ್ಷದ ಜಿಲ್ಲಾ ಪ್ರಮುಖರು , ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular