Saturday, April 26, 2025
Homeರಾಷ್ಟ್ರೀಯಮಹಾ ಕುಂಭಮೇಳ 2025ರಲ್ಲಿ ಅತಿದೊಡ್ಡ ಶೀತಲ ಪಾನೀಯ ಪ್ರದರ್ಶನ ಮಾಡುವ ಮೂಲಕ ಗಿನ್ನೆಸ್ ದಾಖಲೆ ಮಾಡಿ ಇತಿಹಾಸ...

ಮಹಾ ಕುಂಭಮೇಳ 2025ರಲ್ಲಿ ಅತಿದೊಡ್ಡ ಶೀತಲ ಪಾನೀಯ ಪ್ರದರ್ಶನ ಮಾಡುವ ಮೂಲಕ ಗಿನ್ನೆಸ್ ದಾಖಲೆ ಮಾಡಿ ಇತಿಹಾಸ ರಚಿಸಿದ ಕೋಕಾ-ಕೋಲಾ ಇಂಡಿಯಾ ಮತ್ತು ಎಸ್‌ಎಲ್‌ಎಂಜಿ ಬೆವರೇಜಸ್

ರಾಷ್ಟ್ರ: ಕೋಕಾ-ಕೋಲಾ ಇಂಡಿಯಾ ಮತ್ತು ಎಸ್‌ಎಲ್‌ಎಂಜಿ ಬೆವರೇಜಸ್ ಸಹಯೋಗದಲ್ಲಿ ಮಹಾ ಕುಂಭಮೇಳದಲ್ಲಿ ನಡೆದಿರುವ ಅತಿದೊಡ್ಡ ತಾತ್ಕಾಲಿಕ ಶೀತಲ ಪಾನೀಯ ಪ್ರದರ್ಶನವು ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಗೊಂಡಿದೆ.  ಪ್ರಯಾಗ್‌ ರಾಜ್‌ ನಲ್ಲಿ ನಡೆದ ಮಹಾ ಕುಂಭ ಮೇಳದಲ್ಲಿ ತಾಜಾ ಪಾನೀಯಗಳನ್ನು ಒದಗಿಸುವುದರ ಜೊತೆಗೆ ಉದ್ಯಮದಲ್ಲಿ ಹೊಸ ಮಾನದಂಡ ಸ್ಥಾಪಿಸುವ ಈ ಎರಡು ಕಂಪನಿಗಳ ಬದ್ಧತೆಯನ್ನು ಈ ಸಾಧನೆಯು ಸಾರಿದೆ.

250 ಅಡಿ ಉದ್ದದ ಈ ವಿಶಿಷ್ಟ ಪಾನೀಯ ಪ್ರದರ್ಶನವು 100 ಬಾಗಿಲುಗಳ ಕೂಲರ್ ಗೋಡೆಯನ್ನು ಹೊಂದಿದ್ದು, 32,737 ಶೀತಲ ಬಾಟಲಿಗಳಿಂದ ತುಂಬಿತ್ತು. ಮಹಾ ಕುಂಭದಲ್ಲಿ ಕಾಣಿಸುತ್ತಿದ್ದ ಈ ಭವ್ಯ ದೃಶ್ಯವು ಭಾಗವಹಿಸಿದ್ದವರಲ್ಲಿ ಆಶ್ಚರ್ಯ  ಮೂಡಿಸಿತ್ತು. ಗಿನ್ನೆಸ್ ವಿಶ್ವ ದಾಖಲೆ ಸಮಿತಿಯಿಂದ ಅಧಿಕೃತವಾಗಿ ಮಾನ್ಯತೆ ಪಡೆದಿರುವ ಈ ಸಾಧನೆಯು ಕೋಕಾ-ಕೋಲಾ ಇಂಡಿಯಾ ಮತ್ತು ಎಸ್‌ಎಲ್‌ಎಂಜಿ ಬೆವರೇಜಸ್‌ ನ ಶ್ರೇಷ್ಠತೆಗೆ, ಬೃಹತ್ ಪ್ರಮಾಣದ ಕಾರ್ಯನಿರ್ವಹಣೆಗೆ ಮತ್ತು ಲಕ್ಷಾಂತರ ಜನರಿಗೆ ಸ್ಮರಣೀಯ ಕ್ಷಣಗಳನ್ನು ನೀಡುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಈ ಕುರಿತು ಮಾತನಾಡಿರುವ ಕೋಕಾ-ಕೋಲಾ ಇಂಡಿಯಾದ ಭಾರತ ಕಾರ್ಯಾಚರಣೆಯ ಉಪಾಧ್ಯಕ್ಷ ಸುಂದೀಪ್ ಬಜೋರಿಯಾ ಅವರು, “ಗಿನ್ನೆಸ್ ದಾಖಲೆ ಮಾಡಿರುವ ನಮ್ಮ ಕೂಲರ್ ಗೋಡೆಯು ಜಾಗತಿಕ ಮಟ್ಟದಲ್ಲಿ ನಾವೀನ್ಯತೆ ಮತ್ತು ಕಾರ್ಯಗತಗೊಳಿಸುವಿಕೆಯ ವಿಚಾರದಲ್ಲಿ ಹೊಸ ಮಾನದಂಡವನ್ನು ಹಾಕಿಕೊಟ್ಟಿದೆ. ವಿಶ್ವದ ಅತಿದೊಡ್ಡ ಧರ‍್ಮಿಕ ಸಮಾರಂಭಗಳಲ್ಲಿ ಒಂದಾಗಿರುವ ಮಹಾ ಕುಂಭಮೇಳದಲ್ಲಿ ಎಸ್‌ಎಲ್‌ಎಂಜಿ ಬೆವರೇಜಸ್ ಜೊತೆಗಿನ ನಮ್ಮ ಸಹಭಾಗಿತ್ವ ಮೂಲಕ ಲಕ್ಷಾಂತರ ಜನರಿಗೆ ದೊಡ್ಡ ಪ್ರಮಾಣದಲ್ಲಿ ತಂಪು ಪಾನೀಯವನ್ನು ಒದಗಿಸಲಾಗಿದೆ. ಜಾಗತಿಕ ಮಟ್ಟಕ್ಕೆ ಭಾರತದ ಸಂಸ್ಕೃತಿ ಪರಿಚಯಿಸಿರುವ ಮಹಾ ಕುಂಭ ಆಯೋಜಿಸಿರುವ ಉತ್ತರ ಪ್ರದೇಶ ಸರ್ಕಾರದ ದೃಷ್ಟಿಗೆ ಪೂರಕವಾಗಿ ನಾವು ಕೆಲಸ ಮಾಡಿದ್ದೇವೆ” ಎಂದರು.

ಎಸ್‌ಎಲ್‌ಎಂಜಿ ಬೆವರೇಜಸ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಸ್ಟಿನ್ ಮ್ಯಾಂಡ್ರಿಯಾ ಅವರು, “ಮಹಾ ಕುಂಭಮೇಳದಲ್ಲಿ ಲಕ್ಷಾಂತರ ಜನರಿಗೆ ತಂಪು ಪಾನೀಯ ಒದಗಿಸುವುದೇ ಈ ಯೋಜನೆಯ ಉದ್ದೇಶವಾಗಿತ್ತು. ಕೋಕಾ-ಕೋಲಾ ಇಂಡಿಯಾ ಜೊತೆಗಿನ ಸಹಭಾಗಿತ್ವದಲ್ಲಿ ಗಿನ್ನೆಸ್ ದಾಖಲೆ ಮಾಡಿರುವುದು, ಶೀತಲ ಪಾನೀಯಗಳನ್ನು ದೊಡ್ಡ ಪ್ರಮಾಣದಲ್ಲಿ ಜನರಿಗೆ ತಲುಪಿಸುವ ಎಸ್‌ಎಲ್‌ಎಂಜಿನ ಸಾಮರ್ಥ್ಯವನ್ನು ಪ್ರದರ್ಶಿಸಿದೆ” ಎಂದು ತಿಳಿಸಿದರು.

ವಿಸ್ತಾರವಾದ ತಂಪು ಪಾನೀಯ ಪ್ರದರ್ಶನಕ್ಕೆ ಬೇಕಾದ ವ್ಯವಸ್ಥೆ ಮಾಡುವ ಮೂಲಕ ರೂಪುಗೊಂಡ ಈ ಸಾಧನೆಯು ದೊಡ್ಡ ಮಟ್ಟದ ಜಾಗತಿಕ ಕಾರ್ಯಕ್ರಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪಾನೀಯ ಒದಗಿಸುವ ಕಾರ್ಯಕ್ರಮಕ್ಕೆ  ಉತ್ತಮ ಮಾನದಂಡವಾಗಿ ಮೂಡಿಬಂದಿದೆ.

RELATED ARTICLES
- Advertisment -
Google search engine

Most Popular