Thursday, July 25, 2024
Homeಪುತ್ತೂರುಬೆಳ್ತಂಗಡಿ | ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ಬೆಳ್ತಂಗಡಿ | ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ಬೆಳ್ತಂಗಡಿ: ತಾಲೂಕಿನಲ್ಲಿ ಬುಧವಾರ ಸಂಜೆ ಭಾರೀ ಮಳೆಯಾಗಿದ್ದು, ಸಿಡಿಲು, ಗುಡುಗು, ಗಾಳಿ ಸಹಿತ ಮಳೆಗೆ ಅಲ್ಲಲ್ಲಿ ಹಾನಿಗಳಾಗಿವೆ. ತಾಲೂಕಿನ ಕೊಯ್ಯೂರು ಗ್ರಾಮದ ಮೈಂದಕೋಡಿ ಲೋಕಯ್ಯ ಗೌಡರ ಮನೆ ಸಮೀಪದ ತೆಂಗಿನ ಮರಕ್ಕೆ ಸಿಡಿಲು ಬಡಿದ ಘಟನೆ ನಡೆದಿದೆ.

ತೆಂಗಿನ ಮರಕ್ಕೆ ಸಿಡಿಲು ಬಡಿದ ತೀವ್ರತೆಗೆ ತೆಂಗಿನ ಮರದ ತುದಿಯಲ್ಲಿ ಗರಿಗಳಿಗೆ ಬೆಂಕಿ ಹೊತ್ತಿಕೊಂಡು ಉರಿದಿದೆ. ಈ ಕುರಿತಾದ ವಿಡಿಯೋವೊಂದು ವೈರಲ್ ಆಗಿದೆ. ಸಿಡಿಲು ಬಡಿದುದರಿಂದ ಉಂಟಾದ ಬೆಂಕಿಯಿಂದ ತೆಂಗಿನ ತುದಿ ಹಾಗೂ ಗರಿಗಳಲ್ಲಿ ಬೆಂಕಿ ಹೊತ್ತಿಕೊಂಡಿರುವ ದೃಶ್ಯ ಈ ವಿಡಿಯೋದಲ್ಲಿ ಕಂಡುಬಂದಿದೆ.

RELATED ARTICLES
- Advertisment -
Google search engine

Most Popular