ಕೋಲಾರ: ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಕೋಲಾರದ ಖಾಸಗಿ ಕಾಲೇಜಿನಲ್ಲಿ ನಡೆದಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿ ಇಂದು ಕಾಲೇಜು ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ವಿಷಯಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಪೊಲೀಸರು ಬಾಲಕಿಗೆ ಇಂತಹ ಸ್ಥಿತಿಗೆ ಕಾರಣನಾದವನನ್ನು ಹುಡುಕುತ್ತಿದ್ದಾರೆ.
ಬಾಲಕಿಗೆ ಯುವಕನೊಬ್ಬನ ಜೊತೆ ಪ್ರೀತಿಯಿತ್ತು ಎನ್ನಲಾಗಿದೆ. ಆದರೆ ಆತ ಅದೇ ಕಾಲೇಜಿನವನಾ? ಹೊರಗಿನವನಾ? ತಿಳಿದುಬಂದಿಲ್ಲ. ಬಾಲಕಿಯ ಸ್ಥಿತಿಗೆ ಕಾರಣನಾದವನನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಗಳು ತಿಳಿಸಿವೆ.