Saturday, December 14, 2024
Homeಉಡುಪಿಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಬಾ. ಸಾಮಗ ಕರೆ

ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಬಾ. ಸಾಮಗ ಕರೆ

ಉಡುಪಿ : ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಪ್ರಗತಿಯೆಂದರೆ ಕನ್ನಡ ನಾಡಿನ ಪ್ರಗತಿಯೇ ಆಗಿರುವುದರಿಂದ ಕೇಂದ್ರ ಸರ್ಕಾರವು ನೆನೆಗುದಿಯಲ್ಲಿರುವ ಕರ್ನಾಟಕದ ಯೋಜನೆಗಳಿಗೆ ಅನುಮತಿ ನೀಡಿ ಕಾರ‍್ಯಗತಗೊಳಿಸಿ ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಕಾರಣವಾಗಬೇಕೆಂದು ದೆಹಲಿ ಕನ್ನಡಿಗ ಪ್ರತಿಕೆ ಸಂಪಾದಕ ಬಾ. ಸಾಮಗ ಅವರು ಕರೆ ನೀಡಿದರು.
ಸಾಮಗ ಅವರು ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಾಸಂಘ ನ.೨೩ರಂದು ಉಡುಪಿ ಸಮೀಪದ ಕೆಳಾರ್ಕಳಬೆಟ್ಟಿನಲ್ಲಿ ಏರ್ಪಡಿಸಿದ ೧೭ನೇ ವಾರ್ಷಿಕೋತ್ಸವದ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಕರಾವಳಿಯಲ್ಲಿ ಮೆಚ್ಚುಗೆ ಪಡೆದ ಯಕ್ಷಗಾನವು ಕಾಲಕಾಲಕ್ಕೆ ಇತಿಮಿತಿಯಲ್ಲಿ ಬದಲಾವಣೆಗೊಂಡು ಉತ್ತಮ ಅಭಿರುಚಿಯನ್ನು ಬೆಳೆಸಿ ಕನ್ನಡ ವಾತವರಣವನ್ನು ಸೃಷ್ಟಿಸಿ ಯುವ ಜನಾಂಗದವರು ಸರಿಯಾದ ಮಾರ್ಗದಲ್ಲಿ ಮುನ್ನಡೆಯಲು ಕಾರಣವಾಗಿದೆ ಎಂದ ಸಾಮಗರು ಕರ್ನಾಟಕದ ಜಾನಪದ ಕಲೆಗಳ ಕುರಿತು ಮರುಚಿಂತನೆ ಮಾಡಬೇಕೆಂದರು.
ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಸದಾನಂದ ನÊಾಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗುರು ಬಡಾನಿಡಿಯೂರು ಕೇಶಚರಾವ್ ಅವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕ ಸುಬ್ರಹ್ಮಣ್ಯ ಜೋಷಿ, ಕವಿ ದಿನೇಶ್ ಉಪ್ಪೂರು, ಕಲಾವಿದೆ ಮಮತಾ ಶೆಟ್ಟಿ, ಉದ್ಯಮಿ ದಯಾನಂದ ಆಚಾರ್ಯ, ಶೇಷರಾಜ್, ಎಮ್.ಕೆ ಸುಕುಮಾರ್ ಶೆಟ್ಟಿ, ಸಕ್ಕಟ್ಟು ಜಯರಾಮಯ್ಯ ಉಪಸ್ಥಿತರಿದ್ದರು. ರವಿನಂದನ್ ಭಟ್ ನಿರೂಪಿಸಿದರು.
ಬಳಿಕ ವೀರ ಬರ್ಬರೀಕ, ವಿದ್ಯುನ್ಮಾಲಿ ಕಾಳಗ, ಮಯಾಪುರಿ ವಿಜಯ, ದಕ್ಷಯಜ್ಞ, ಗಿರಿಜಾ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನಡೆಯಿತು. ಚಿತ್ರದಲ್ಲಿ ಬಾ.ಸಾಮಗ ಭಾಷಣ ಮಾಡುತ್ತಿರುವುದು. ಸುಬ್ರಹ್ಮಣ್ಯ ಜೋಷಿ, ಸದಾನಂದ ನÊಾಕ್, ಕೇಶವ ರಾವ್, ಮಮತಾ, ಶೇಷರಾಜ್ ಅವರನ್ನೂ ಚಿತ್ರದಲ್ಲಿ ಕಾಣಬಹುದು.

RELATED ARTICLES
- Advertisment -
Google search engine

Most Popular