Sunday, March 23, 2025
Homeರಾಜ್ಯಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಆರಂಭೋತ್ಸವ

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಆರಂಭೋತ್ಸವ

ಪಿ. ಆರ್. ಎನ್ .ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶೈಕ್ಷಣಿಕ ವರ್ಷದ ಆರಂಭೋತ್ಸವ ನಡೆಯಿತು. ಸಂಸ್ಕಾರಯುತ ಶಿಕ್ಷಣ ನಮ್ಮ ಧೇಯ್ಯವಾಗಿದೆ, ರಾಷ್ಟ್ರ ನಿರ್ಮಾಣ ಮಾಡಲು ತಮ್ಮನ್ನು ಅರ್ಪಿಸಿಕೊಂಡ ಸ್ವತಂತ್ರ ಹೋರಾಟಗಾರರ ಛಲವನ್ನು ನಮ್ಮಲ್ಲಿ ಒಗ್ಗೂಡಿಸಿಕೊಳ್ಳಬೇಕು . ಜೊತೆಗೆ ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅಮೃತ ಭಾರತಿ ಟ್ರಸ್ಟನ ಸದಸ್ಯರು ಬಾಲಕೃಷ್ಣ ಮಲ್ಯ ನುಡಿದರು .ಅಮೃತ ಭಾರತಿ ವಿದ್ಯಾಲಯದ ಆರಂಭೋತ್ಸವವನ್ನು ಭಾರತ ಮಾತೆ ,ಸರಸ್ವತಿ , ಓಂಕಾರ ಭಾವಚಿತ್ರಕ್ಕೆ ದೀಪಬೇಳಗಿಸಿ , ಪುಷ್ಪಾರ್ಚನೆ ಮಾಡುವುದರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು . ಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷರು CA.ಎಂ .ರವಿರಾವ್ , ಕಾರ್ಯದರ್ಶಿ ಗುರುದಾಸ್ ಶೆಣೈ , ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರು ಶೈಲೇಶ್ ಕಿಣಿ , ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಸಂಚಾಲಕರು ರಾಜೇಶ್ ನಾಯಕ್ , ಅಮೃತ ಭಾರತಿ ವಸತಿ ನಿಲಯದ ಅಧ್ಯಕ್ಷರು ಯೋಗೀಶ್ ಭಟ್ , ಸದಸ್ಯರು ಸುಧೀರ್ ನಾಯಕ್ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶಕುಂತಲಾ , ಅಪರ್ಣ ಉಪಸ್ಥಿತರಿದ್ದರು. ನಿರೂಪಣೆ ಸಂಸ್ಥೆಯ ಸಂಸ್ಕೃತ ಗುರೂಜಿ ವೇದವ್ಯಾಸ ತಂತ್ರಿ ಮಾಡಿದರು. ಆರತಿ ಬೆಳಗಿ , ಹಣೆಗೆ ತಿಲಕ ಹಚ್ಚಿ , ಸಿಹಿ ನೀಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ಸೆಲ್ಪಿ ಕಾರ್ನರ್ , ರೈಲು ಮಾದರಿ ವಿದ್ಯಾರ್ಥಿಗಳಿಗೆ ತುಂಬಾ ಆಕರ್ಷಣೆ ಆಗಿತ್ತು.

RELATED ARTICLES
- Advertisment -
Google search engine

Most Popular