26.6 C
Udupi
Tuesday, November 29, 2022
spot_img

ಕರ್ನಾಟಕ ರಾಜ್ಯ ಪರವನ್ ಸಂಘದ ಕೆರ್ವಾಶೆ ಘಟಕದ ಸಮಿತಿ ರಚನೆ

ಕರ್ನಾಟಕ ರಾಜ್ಯ ಪರವನ್ ಸಂಘದ ಕೆರ್ವಾಶೆ ಘಟಕದ ಸಮಲೋಚನ ಸಭೆ ಮತ್ತು ಸಮಿತಿ ರಚನೆಯು ನಿನ್ನೆ ಕೆರ್ವಾಶೆ ಸಾಗರ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕರ್ನಾಟಕ ರಾಜ್ಯ ಪರವನ್ ಸಂಘದ ಅಧ್ಯಕ್ಷರಾದ ಶ್ರೀಯುತ ನಾರಾಯಣ ಮಾಂಟ್ರಡಿ ವಹಿಸಿಕೊಂಡಿದ್ದರು. ಸಂಘಟನೆಯ ಬಗೆಗೆ ಮತ್ತು ಸಂಘಟನೆಯ ಉದ್ದೇಶ, ವಿಚಾರಗಳನ್ನು ಪ್ರಾಸ್ತವಿಕವಾಗಿ ಶ್ರೀಯುತ ಜಗನ್ನಾಥ ಕೋಣಜೆ ಮಾತನಾಡಿದರು. ಸಮಾಜದ ಎಲ್ಲರ ಮನಸ್ಸನ್ನು ಒಂದುಗೂಡಿಸುವ ಒಬ್ಬರಿಗೊಬ್ಬರು ಪೂರಕರಾಗಿ ಯೋಚಿಸಿ ಸಮಾನತೆಯಿಂದ ನಡೆದುಕೊಂಡು ಸಮಾಜದಲ್ಲಿ ಆಗಬೇಕಾದ ಪರಿವರ್ತನೆಗಳಿಗೆ ಮಾದರಿಯಾಗೋಣ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಡಾ ರವೀಶ್ ಪಡುಮಲೆ ಹೇಳಿದರು.

ಕೆರ್ವಾಶೆ ಘಟಕದ ಅಧ್ಯಕ್ಷರಾಗಿ ಸಂಜೀವ ಮಾಳ, ಉಪಾಧ್ಯಕ್ಷರಾಗಿ ವನಿತಾ ಕೆರ್ವಾಶೆ, ಕಾರ್ಯದರ್ಶಿಯಾಗಿ ಸುಧೇಶ್ ಕೆರ್ವಾಶೆ, ಜತೆ ಕಾರ್ಯದರ್ಶಿಯಾಗಿ ಸತೀಶ್ ಕೆರ್ವಾಶೆ, ಸಂಘಟನಾ ಕಾರ್ಯದರ್ಶಿಯಾಗಿ ಸುಮನಾ ಶಿರ್ಲಾಲ್, ಗೌರವ ಸಲಹೆಗಾರರಾಗಿ ಸಂತೋಷ್ ಮಾಳ, ಕಿಟ್ಟ ಮಾಳ, ರಾಘು ಕೆರ್ವಾಶೆ, ಅಣ್ಣಿ ಕೆರ್ವಾಶೆ, ಸದಸ್ಯರುಗಳಾಗಿ ವಿಕಾಸ್, ಮನೋಜ್, ಸುಮಿತ್ರ, ವಿಶಾಲಾಕ್ಷಿ ಕೆರ್ವಾಶ, ಶ್ರೀಧರ್ ಮಾಳ, ಶಾರದಾ ಬಂಗ್ಲೆಗುಡ್ಡೆ, ಸುನೀತಾ ಕೆರ್ವಾಶೆ, ವಿಕಾಸ್ ಕೆರ್ವಾಶೆ, ಶ್ರೀಧರ್ ಕೆರ್ವಾಶೆ,ರಾಘು ಬಂಗ್ಲೆಗುಡ್ಡೆ ಸತೀಶ್ ಶೆಟ್ಟಿಬೆಟ್ಟು, ವಸಂತ ಮಿಯ್ಯಾರು ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪರವನ್ ಸಂಘದ ಉಪಾಧ್ಯಕ್ಷರಾದ ಶ್ರೀ ಸುರೇಶ್ ಮರೋಡಿ, ಕಾರ್ಯದರ್ಶಿಗಳಾದ ಶ್ರೀ ನಿರಂಜನ್ ಬಾಚಕೆರೆ, ಖಜಾಂಜಿ ಶ್ರೀ ಅಶೋಕ್ ಪದಾಧಿಕಾರಿಗಳಾದ ನಾರಾಯಣ ಗಾಂಧಿನಗರ, ಪ್ರವೀಣ್ ಯೋಗೀಶ್ ಸಾಣೂರು, ರಮೇಶ್ ಮರೋಡಿ, ಉಮೇಶ್, ಸಂತೋಷ್ ನೀರುಡೆ, ರಾಜು ಮಾರ್ನಾಡು, ಚುಕುಡ ಕುಕ್ಕಂದೂರು, ಡಾ ಪ್ರಭಾಕರ್, ಸುಕುಮಾರ್ ನಿಟ್ಟೆ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles