spot_img
22.6 C
Udupi
Monday, January 30, 2023
spot_img
spot_img
spot_img

ಕಮ್ಯುನಿಟಿ ರೇಡಿಯೋ ಅಸೋಸಿಯೇಶನ್ ಮತ್ತು ಯುನಿಸೆಫ್ ನ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ

ಉಡುಪಿ: ಕಮ್ಯುನಿಟಿ ರೇಡಿಯೋ ಅಸೋಸಿಯೇಶನ್ ಮತ್ತು ಯುನಿಸೆಫ್ ನ ಸಹಯೋಗದಲ್ಲಿ ಮಣಿಪಾಲದ ಮಣಿಪಾಲ್ ಅಕಾಡೆಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚಂದ್ರಶೇಖರ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಪೌಷ್ಠಿಕ ಆಹಾರದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆಮಾಹಿತಿ ನೀಡಿದರು. ಮಣಿಪಾಲದ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೋ ಮಣಿಪಾಲ್ ಸಮಯದಾಯ ಬಾನುಲಿ ಕೇಂದ್ರದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ.ರಶ್ಮಿ ಅಮ್ಮೆಂಬಳ ರೇಡಿಯೋ ಮಣಿಪಾಲದ ಜಾಗೃತಿ ಕಾರ್ಯಕ್ರಮದ ಕುರಿತು ಪ್ರಸ್ತಾವನೆಗೈದರು. ಶಾಲಾ ಮುಖ್ಯಶಿಕ್ಷಕರಾದ ಲಕ್ಷ್ಮಿ ಉಪಸ್ಥಿತರಿದ್ದರು. ಶಾಲಾ ಸಿಬ್ಬಂದಿಗಳು ಸಹಕರಿಸಿದರು.

ಈ ಕಾರ್ಯಕ್ರಮವು ಸೆಪ್ಟೆಂಬರ್ ತಿಂಗಳ ದಿನಾಂಕ 16 ರಂದು ಶುಕ್ರವಾರ ಸಂಜೆ 4.15 ಕ್ಕೆ ಪ್ರಸಾರವಾಯಿತು. ಬಸೆಪ್ಟೆಂಬರ್ 17 ರಂದು ಮದ್ಯಾಹ್ನ 12.15ಕ್ಕೆ ಮರುಪ್ರಸಾರವಾಗಲಿದೆ.

Related Articles

Stay Connected

0FansLike
3,687FollowersFollow
0SubscribersSubscribe
- Advertisement -

Latest Articles