NH 169 ಸಾಣೂರು–ಮಾಳ ಯೋಜನೆಯಲ್ಲಿ ಪರಿಹಾರ ತಾರತಮ್ಯ : ಭೂ ಮಾಲೀಕರಿಗೆ ಅನ್ಯಾಯ

0
25

ಕಾರ್ಕಳ : N. H. 169 ಸಾಣೂರು ಮಾಳ ಅಗಲೀಕರಣವು N. H. 169. ಬಿ ಕರ್ಣ ಕಟ್ಟೆ ಸಾಣೂರು ಯೋಜನೆಯು ಮುಂದುವರಿದು ಮಾಳದ ತನಕ ಹದಿನೈದು ಕಿಲೋಮೀಟರ್ ನಷ್ಟು ವಿಸ್ತೀರ್ಣ ಗೊಂಡಿರುವ ಯೋಜನೆ ಈ ಯೋಜನೆಯಲ್ಲಿ 1-03-2023 ರಂದು ಮೊದಲ 3.a ತದನಂತರದ
12-01-2024 ರಂದು 3ಡಿ ನೋಟಿಫಿಕೇಶನ್ ಹಾಗೂ ಅದಕ್ಕೆ ಸಂಬಂಧಪಟ್ಟ 3g ಅವಾರ್ಡ್ ಸೆಪ್ಟೆಂಬರ್ 2024 ರಲ್ಲಿ ಪ್ರಕಟಗೊಂಡಿತ್ತು. ಮೊದಲ ನೋಟಿಫಿಕೇಶನ್ ನಲ್ಲಿ ಬಿಟ್ಟು ಹೋಗಿದ್ದ ಭೂಮಿಗಳಿಗೆ ಆನಂತರ ಹನ್ನೆರಡು ನಾಲ್ಕು 25 ರಂದು 3A ಹಾಗೂ21.12.25 ರಂದು ತ್ರೀಡಿ ನೋಟಿಫಿಕೇಶನ್ ನೀಡಲಾಯಿತು.
N. H. 169 ಬಿ ಕರ್ಣ ಕಟ್ಟೆ ಸಾಣೂರು ಯೋಜನೆಯದ್ದೆ ವಿಸ್ತರಣೆಯಾದರೂ N. H169 ಸಾಣೂರು ಮಾಳ ನೋಟಿಫಿಕೇಶನ್ ನಲ್ಲಿ ಗುರುತಿಸಲ್ಪಟ್ಟ ಜಮೀನುಗಳಿಗೆ ಬೇರೆ ನಿಯಮಗಳನ್ನು ಅನ್ವಯಿಸಿ ಹಾಗೂ ಭಿನ್ನವಿದಾನಗಳನ್ನು ಅನುಸರಿಸಿ ಪರಿಹಾರ ನಿಗದಿಪಡಿಸಿದ್ದಾರೆ. ಈ ತಾರತಮ್ಯದಿಂದಾಗಿ ಸಾಣೂರಿನಿಂದ ಮಾಳದವರೆಗೆ ಭೂ ಮಾಲೀಕರ ಜಮೀನುಗಳಿಗೆ ಬಹಳ ಕಡಿಮೆ ಮೌಲ್ಯ ನಿರ್ಧರಿತವಾಗಿದೆ ಎಂದು ಸಾಣೂರು ಭೂ ಮಾಲೀಕರ ಹೋರಾಟ ಸಮಿತಿಯ ಸದಸ್ಯರಾದ ಜಾನ್ ಡಿ ಸಿಲ್ವ ಅವರು ಕಾರ್ಕಳ ದ ಪತ್ರಿಕ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಂತರ ಮಾತನಾಡಿದ ಪ್ರೇಮಲತಾ ರತ್ನಾಕರ್ ಶೆಟ್ಟಿ ಕೃಷಿ ಭೂಮಿಗೆ ಮೌಲ್ಯವನ್ನು ನಿರ್ದೇಶವಾದ 12.5.cens ಹಾಗೂ ಅದಕ್ಕಿಂತ ಕಡಿಮೆ ವಿಸ್ತೀರ್ಣದ ಭೂಮಿಗಳ ಅಂಕಿ ಅಂಶಗಳನ್ನು ಗಣನೇ ಗೆ ತೆಗೆದುಕೊಳ್ಳದೆ ಭೂಮಿಗಳಿಗೆ ಅತಿ ಕಡಿಮೆ ಮೌಲ್ಯ ನಿಗದಿಪಡಿಸಲಾಗಿದೆ ಇದು Rfctlar ast 2013 ಮಾರ್ಗಸೂಚಿಗಳ ವಿರುದ್ಧವಾಗಿದೆ ಕೃಷಿಕರಿಗೆ ಇದರಿಂದ ಬಹಳ ಅನ್ಯಾಯವಾಗುತ್ತಿದೆ ಮತ್ತು ಜಮೀನುಗಳಲ್ಲಿರುವ ಕಟ್ಟಡಗಳ ಮೌಲ್ಯ ನಿಗದಿಸುವಾಗಲು ಇದೇ ರೀತಿ ತಾರಮಯ್ಯದ ನೀತಿಯನ್ನು ಅನುಸರಿಸಿದ್ದಾರೆ. ಮೂಲ ಮೌಲ್ಯಗಳಲ್ಲಿಯೇ ತಾರತಮ್ಯ ಮಾಡಿದ್ದಾರೆ ಅಷ್ಟೇ ಅಲ್ಲದೆ depreciation ನೆಪದಲ್ಲಿ ಪುನಃ 30-40% ರಷ್ಟು ಅಪ ಮೌಲ್ಯ ಮಾಡಿ ಕಟ್ಟಡದ ಮಾಲೀಕನಿಗೂ ತುಂಬಾ ಅನ್ಯಾಯ ಆಗುತ್ತಿದೆ ಕಟ್ಟಡಗಳ ಮೌಲ್ಯಮಾಪನ ಮಾಡುವಾಗ ಈಗಿನ ಕಾಲದಲ್ಲಿ ಅಷ್ಟೇ ವಿಸ್ತೀರ್ಣದ ಅದೇ ವಿನ್ಯಾಸದ ಕಟ್ಟಡ ಕಟ್ಟುದಾದರೆ ತಗಲುವ ವೆಚ್ಚದ ಪ್ರಕಾರ ಕಟ್ಟಡಗಳ ಮೌಲ್ಯವನ್ನು ನಿರ್ಧರಿಸಬೇಕು ಈ ನಿಯಮಗಳನ್ನು ಸರಿಯಾಗಿ ಪಾಲಿಸಿ NH169 ಬಿ ಕರ್ನ ಕಟ್ಟೆ ಸಾಣೂರು ಭೂ ಮಾಲೀಕರಿಗೆ ಸರಿಯಾದ ಮೌಲ್ಯ ನೀಡಿದ್ದಾರೆ. ಆದರೆ ಸಾಣೂರು ಮಾಳದ ಯೋಜನೆಯಾಡಿಯಲ್ಲಿ ಕಟ್ಟಡಗಳ ಬೆಲೆಯನ್ನು ಅಪಮೌಲ್ಯಮಾಡಿ 15-20. ವರ್ಷದ ಹಿಂದೆ ಕಟ್ಟಡ ಕಟ್ಟುದಾದರೆ ತಗಲುವಷ್ಟು ಪರಿಹಾರವನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಯರಾಮ ಪೂಜಾರಿ, ಶಾಮ ಎಂ ಶೆಟ್ಟಿ, ಪದ್ಮನಾಭ ನಾಯಕ್, ಅನಿತಾ ವೈಎಸ್ ಹಾಗೂ ಶಿವಣ್ಣಶೆಟ್ಟಿಗಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here