ಜುಲೈ 18: ದಿನಾಂಕ 12.07.2024ರಂದು ಕಾರ್ಕಳ ಪೆರ್ವಾಜೆ ಬಿಲ್ಲವ ಸಂಘದ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸರಕಾರಿ ಕಾರ್ಯಕ್ರಮದ ನಿಯಮಾವಳಿಯನ್ನು ಧಿಕ್ಕರಿಸಿ ಸಾಮಾಜಿಕ ಶಾಂತಿ ಕೆದಡುವ ಕೃತ್ಯ ಮಾಡಿದ ಕಾಂಗ್ರೆಸ್ ಪಕ್ಷದ ಕಾರ್ಕಳ ಪುರಸಭೆ ಸದಸ್ಯ ಶ್ರೀ ಶುಭದ್ ರಾವ್ ರವರ ಮೇಲೆ ಇಂದು ಬಿಜೆಪಿ ಯುವ ಮೋರ್ಚಾ ಕಾರ್ಕಳ ಮಂಡಲದ ಪದಾಧಿಕಾರಿಗಳು ದೂರು ನೀಡಿದ್ದಾರೆ.
ಕಾನೂನುಬಾಹಿರವಾಗಿ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಲ್ಲದೆ ಅದನ್ನು ಪ್ರಶ್ನಿಸಿದ ಅಧಿಕಾರಿಯ ವಿರುದ್ಧ ಏರು ದನಿಯಲ್ಲಿ ಮಾತಾಡಿ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಶುಬಧ ರಾವ್ ಶಾಂತಿ ಭಂಗ ಮಾಡಿರುತ್ತಾರೆ ಹಾಗೂ ಕೆಲವು ತಿಂಗಳ ಹಿಂದೆಯೂ ಕೂಡ ಬೈಲೂರಿನ ಉಮಿಕಲ್ ಬೆಟ್ಟಕ್ಕೆ ಕಾನೂನುಬಾಹಿರವಾಗಿ ತೆರಳಿ, ಪರಶುರಾಮ ಮೂರ್ತಿಯ ಭಾಗಗಳನ್ನು ಕಿತ್ತು ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿರುತ್ತಾರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಕಳ ಶಾಸಕರನ್ನು ತುಚ್ಛ ಶಬ್ದಗಳಿಂದ ನಿಂದನೆ ಕೂಡ ಮಾಡಿದ್ದಾರೆ. ಇಂತಹ ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಈ ರೀತಿ ವರ್ತನೆ ಮಾಡುವುದು
ಸಮಾಜದಲ್ಲಿ ಅಹಿತಕರ ಘಟನೆ ನಡೆಯುವಂತೆ ಪ್ರಚೋದನೆ ಮಾಡುವುದಲ್ಲದೇ, ಸಾರ್ವಜನಿಕ ಶಾಂತಿ ಭಂಗ ಹಾಗು ವೈಯಕ್ತಿಕ ನಿಂದನೆಯನ್ನು ಕೂಡ ಮಾಡುತ್ತಿದ್ದಾರೆ. ಇಂತಹ ಶಾಂತಿ ಕೆದಡುವ ಕಾರ್ಯಗಳು ಮರುಕಳಿಸಬಾರದು ಎಂದು ಶುಭದ್ ರಾವ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕಾರ್ಕಳ ಮಂಡಲದಿಂದ ದೂರು ಸಲ್ಲಿಸಲಾಗಿದೆ.