Saturday, July 20, 2024
Homeರಾಜ್ಯಆಧ್ಯಾತ್ಮ ಪರಂಪರೆಯ ಸುಭಾಷಿತ ಜೀವನದ ಪರಿವರ್ತನೆಗೆ ಪೂರಕ - ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು

ಆಧ್ಯಾತ್ಮ ಪರಂಪರೆಯ ಸುಭಾಷಿತ ಜೀವನದ ಪರಿವರ್ತನೆಗೆ ಪೂರಕ – ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು

ದಾವಣಗೆರೆ: ಮಾನವ ಜೀವನದ ಪರಿವರ್ತನೆಗೆ ಆಧ್ಯಾತ್ಮ ಸೇವಾ ಮನೋಭಾವದ ಜತೆ ನಮ್ಮ ನಿಮ್ಮೆಲ್ಲರ ಬದುಕು ಕೇವಲ ದುಡಿಮೆಗೆ ಸೀಮಿತವಾಗದೇ ಸಮಾಜ ಸೇವೆ ಸಾಮಾಜಿಕ ಕಾಳಜಿಯ ಕಾಯಕಗಳಲ್ಲಿ ತೊಡಗಿಸಿಕೊಂಡಾಗ ಜೀವನದ ಸಾರ್ಥಕತೆಗೆ ಪೂರಕ ಎಂದು ದಾವಣಗೆರೆ ಜಿಲ್ಲೆಯ ಶ್ರೀ ಕ್ಷೇತ್ರ ಅವರಗೊಳ್ಳದ ಪುರವರ್ಗ ಮಠದ ಪರಮಪೂಜ್ಯ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಅಂತರಾಳದ ಭಾವನೆ ಹಂಚಿಕೊಂಡರು. ದಾವಣಗೆರೆಯ ಪ್ರೇಮಾ ಅರುಣಾಚಲ ಎನ್.ರೇವಣಕರ್ ಪ್ರತಿಷ್ಠಾನದ ಆಶ್ರಯದಲ್ಲಿ ಇತ್ತೀಚಿಗೆ ನಗರದ ವಿನೋಬನಗರ ಒಂದನೇ ಮುಖ್ಯರಸ್ತೆಯಲ್ಲಿರುವ ಗೌರಮ್ಮ ನರಹರಿ ಶೇಟ್ ಮಿನಿ ಸಭಾಂಗಣದಲ್ಲಿ ನಡೆದ ನಲ್ಲೂರು ಲಕ್ಷ್ಮಣ್‌ರಾವ್ ರೇವಣಕರ್ ವಿರಚಿತ ಆಧ್ಯಾತ್ಮಿಕ ಪರಂಪರೆಯ ಸುಭಾಷಿತ ಸಂಗ್ರಹದ ಹೊತ್ತಿಗೆಗಳ ಲೋಕಾರ್ಪಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಪುಸ್ತಕಗಳ ಲೋಕಾರ್ಪಣೆಯ ಮಾಡಿದ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿಗಳು, ಹಿರಿಯ ಸಾಹಿತಿ, ಶಿಕ್ಷಣ ತಜ್ಞರಾದ ಡಾ. ಎಚ್.ವಿ.ವಾಮದೇವಪ್ಪ ಮಾತನಾಡಿ, ಪೋಷಕರು ಮಕ್ಕಳೊಂದಿಗೆ ಶೈಕ್ಷಣಿಕ ಕಾಳಜಿಯಿಂದ ಮೊಬೈಲ್ ಬಿಟ್ಟು
ಪುಸ್ತಕ ಓದುವ, ಓದಿಸುವ ಹವ್ಯಾಸಗಳನ್ನು ಅನುಸರಿಸಿದಾಗ ಮಕ್ಕಳ ಮುಂದಿನ ಭವ್ಯ ದಿವ್ಯ ಭವಿಷ್ಯಕ್ಕೆ ಭದ್ರವಾದ ಬುನಾದಿ. ಮದರ್ ತೆರೇಸಾ, ಅಬ್ದುಲ್ ಕಲಾಂ ಸೇರಿದಂತೆ ಅನೇಕ ಹಿರಿಯ ದಿಗ್ಗಜರು ತಮ್ಮ ತಮ್ಮ ಜೀವನದಲ್ಲಿ ಸಾಮಾಜಿಕ ಕಾಳಜಿಯೊಂದಿಗೆ ಸಮಾಜ ಸೇವೆಗೆ ಅಳವಡಿಸಿಕೊಂಡಿದ್ದು ಪ್ರಸ್ತುತ ನವಯುವ ಪೀಳಿಗೆಗಳಿಗೆ ಮಾದರಿ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೇಮಾ ಅರುಣಾಚಲ ಎನ್.ರೇವಣಕರ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಪ್ರಶಾಂತ್ ವಿಶ್ವನಾಥ್ ವರ್ಣೇಕರ್, ದಾವಣಗೆರೆಯ ಕಲಾಕುಂಚದ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಕೃತಿಗಳ ರಚನಾಕಾರರದ ನಲ್ಲೂರು ಲಕ್ಷ್ಮಣ್‌ರಾವ್ ರೇವಣಕರ್ ಮಾತನಾಡಿ ಶುಭ ಕೋರಿದರು. ನೇತ್ರಾ ಸಾಯಿಪ್ರಕಾಶ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಪುಷ್ಪಾ ಮಂಜುನಾಥ್ ಸ್ವಾಗತಿಸಿದರು. ಕೆ.ಸಿ.ಉಮೇಶ್‌ರವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭಕ್ಕೆ ಮೊದಲು ಅವಕಾಶ ವಂಚಿತ ಮಹಿಳೆಯರಿಗೆ, ಮಕ್ಕಳಿಗೆ ಮುಕ್ತವಾದ ಸೂಕ್ತವಾದ ವೇದಿಕೆಯನ್ನು ಕಲ್ಪಿಸುವ ಸದುದ್ದೇಶದಿಂದ “ಆಕರ್ಷಕ ಗೃಹಿಣಿ ಸ್ಪರ್ಧೆ” ಸೇರಿದಂತೆ ವಿವಿಧ ಆಟೋಟ ಸ್ಪರ್ಧೆ, ರಸರಂಜನೆಗಳಲ್ಲಿ ವಿಜೇತರಾದವರಿಗೆ ಅಭಿನಂದನಾ ಪತ್ರ, ಪುಸ್ತಕದ ಉಡುಗೊರೆಯೊಂದಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಹೇಮಾ ಶಾಂತಪ್ಪ ಪೂಜಾರಿ, ಜ್ಯೋತಿ ಗಣೇಶ್‌ಶೆಣೈ, ಲಲಿತಾ ಕಲ್ಲೇಶ್, ಪ್ರಭಾ ರವೀಂದ್ರ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರು. ಕೊನೆಯಲ್ಲಿ ಸುಪ್ರೀತಾ ಕಾರ್ತಿಕ್ ರೇವಣಕರ್ ವಂದಿಸಿದರು.

RELATED ARTICLES
- Advertisment -
Google search engine

Most Popular