Wednesday, July 24, 2024
HomeUncategorizedಆವರಣ ಗೋಡೆ ಕುಸಿದು ಎರಡೂವರೆ ವರ್ಷದ ಮಗುವಿಗೆ ಗಂಭೀರ ಗಾಯ

ಆವರಣ ಗೋಡೆ ಕುಸಿದು ಎರಡೂವರೆ ವರ್ಷದ ಮಗುವಿಗೆ ಗಂಭೀರ ಗಾಯ

ಮಂಜೇಶ್ವರ: ಆವರಣ ಗೋಡೆಯೊಂದು ಕುಸಿದು ಬಿದ್ದು ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮಂಜೇಶ್ವರ ಕುಂಜತ್ತೂರು ಬಳಿ ಈ ಘಟನೆ ನಡೆದಿದೆ.
ಮಂಜೇಶ್ವರ ಪಂಚಾಯತ್‌ ವ್ಯಾಪ್ತಿಯ ಕುಂಜತ್ತೂರು ಸನ್ನಡ್ಕದಲ್ಲಿ ವಾಸವಾಗಿರುವ ಅನ್ಯ ರಾಜ್ಯ ಕಾರ್ಮಿಕ, ಉತ್ತರ ಪ್ರದೇಶ ಮೂಲದ ಮುಹಮ್ಮದ್‌ ಅಮೀನ್‌ ಎಂಬವರ ಪುತ್ರ ಗಾಯಗೊಂಡ ಬಾಲಕ.


ಪಕ್ಕದ ಖಾದರ್‌ ಎಂಬವರ ಮನೆಯ ಗೋಡೆ ಕುಸಿದು ಬಾಲಕ ಶೆರ್ಶಾಝ್‌ ಶಾಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರ ನೆರವಿನೊಂದಿಗೆ ಮಗುವನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES
- Advertisment -
Google search engine

Most Popular