Saturday, February 15, 2025
Homeರಾಜ್ಯಬೆಂಗಳೂರಿನಲ್ಲಿ 150 ಅಡಿ ಎತ್ತರದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಿಸುವಂತೆ ಒತ್ತಾಯ

ಬೆಂಗಳೂರಿನಲ್ಲಿ 150 ಅಡಿ ಎತ್ತರದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಿಸುವಂತೆ ಒತ್ತಾಯ

ತೆಲಂಗಾಣ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 150 ಅಡಿ ಎತ್ತರದ ಬೃಹತ್ ಪ್ರತಿಮೆ ನಿರ್ಮಿಸಬೇಕು ಎಂದು ಆನೇಕಲ್ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ (ರಿ) ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆನೇಕಲ್ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ರಾಜ್ಯ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ ಕೃಷ್ಣಪ್ಪ, ಅಸ್ಪೃಶ್ಯತೆ, ಅಸಮಾನತೆ, ಅನ್ಯಾಯ, ಕಂದಾಚಾರ, ಮೌಢ್ಯ, ದೌರ್ಜನ್ಯ, ದಬ್ಬಾಳಿಕೆಗಳಿಂದ ತುಂಬಿ ತುಳುಕುತ್ತಿದ್ದ ಸಮಾಜಕ್ಕೆ ಸಮಾನತೆಯ ಸಂವಿಧಾನವನ್ನು ರಚಿಸಿ ಕೊಡುವ ಮೂಲಕ ಭಾರತದ ಗೌರವವನ್ನು ಎತ್ತರಿಸಿದ ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಿಸಲು ಸೂಕ್ತ ಜಾಗ ಗುರುತಿಸಿ ತಕ್ಷಣವೇ ಕಾರ್ಯ ಪ್ರವೃತ್ತರಾಗಬೇಕು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಅಗಾಧವಾದ ಸಾಧನೆಯನ್ನು ಗುರುತಿಸಿ ತೆಲಂಗಾಣದಲ್ಲಿ 120 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಇದು ಭಾರತೀಯರೆಲ್ಲರು ಹೆಮ್ಮೆ ಪಡುವ ವಿಚಾರ. ಬೆಂಗಳೂರಿನಲ್ಲಿ ಇನ್ನೂ ಎತ್ತರದ ಪ್ರತಿಮೆ ನಿರ್ಮಿಸಬೇಕು ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಹಿಳಾ ರಾಜ್ಯಾಧ್ಯಕ್ಷರಾದ ಬೊಮ್ಮಸಂದ್ರ ರೇಣುಕಾ, ರಾಜ್ಯ ಉಪಾಧ್ಯಕ್ಷ ಮಣಿಗಾನಹಳ್ಳಿ ವಿ ಶ್ರೀನಿವಾಸ, ರಾಜ್ಯ ಪ್ರಧಾನ ಕಾರ್ಯದರ್ಶಿ, ಉದಯಕವಿ ರಾಜ್ಯ ಕಾರ್ಯಾಧ್ಯಕ್ಷರುಗಳಾದ ರವಿಚಂದ್ರ ಎಸ್, ಮೀಸೆ ರಾಮಣ್ಣ, ರಾಜ್ಯ ಮಹಿಳಾ ಗೌ. ಅಧ್ಯಕ್ಷರಾದ ಸಿ. ಮೀನಾಕ್ಷಿ ಹಾಗೂ ಕನ್ನಡಾಂಬೆ ಸಿಂಹ ಘರ್ಜನೆ ರಾಜ್ಯಾದ್ಯಕ್ಷ ಪಿ ಮಂಜುನಾಥ್, ಬಿಜೆಪಿ ಮುಖಂಡ ಕೊಪ್ಪ ಮುನಿರಾಜಣ್ಣ, ಟಿಪಿ ಮಾಜಿ ಸದಸ್ಯ ಶೇಕ್ ರಿಜ್ವಾನ್ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular