ಯುವವಾಹಿನಿ (ರಿ) ಮೂಡುಬಿದ್ರೆ ಘಟಕದ ವತಿಯಿಂದ ಕಂಪ್ಯೂಟರ್ ಟೇಬಲ್‌ ಮತ್ತು ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ

0
219

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಮೂಡುಬಿದ್ರೆ ಘಟಕದ ವತಿಯಿಂದ ಇಂದು ಮೂಡಬಿದ್ರೆಯ ಸರಕಾರಿ ಮೈನ್ ಶಾಲೆಗೆ ಅಗತ್ಯವಿರುವ ಕಂಪ್ಯೂಟರ್ ಟೇಬಲನ್ನು ಸದಸ್ಯರಾದ ಉಮೇಶ್ ಕೋಟ್ಯಾನ್ ಇವರ ಆರ್ಥಿಕ ನೆರವಿನ ಮುಖಾಂತರ ಅಧ್ಯಕ್ಷರಾದ ಶಂಕರ್ ಎ.ಕೋಟ್ಯಾನ್ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ, ಮಾಜಿ ಅಧ್ಯಕ್ಷರಾದ ಸುಶಾಂತ್ ಕರ್ಕೇರ, ಕಾರ್ಯದರ್ಶಿ ಗಿರೀಶ್ ಕೋಟ್ಯಾನ್, ಸದಸ್ಯರಾದ ಉಮೇಶ್ ಕೋಟ್ಯಾನ್, ಹಾಗೂ ಬಿಲ್ಲವ ಸಂಘದ ಸದಸ್ಯರಾದ ಲಕ್ಷ್ಮಣ್ ಪೂಜಾರಿ ಇವರೆಲ್ಲರೂ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ )ಮೂಡುಬಿದಿರೆ ಘಟಕದ ವತಿಯಿಂದ ಮೂಡುಮಾರ್ನಾಡು ಅಂಗನವಾಡಿ ಶಾಲೆಯ ಸುಮಾರು 15 ಪುಟಾಣಿಗಳಿಗೆ ಉಚಿತ ಸಮವಸ್ತ್ರ ವಿತರಣೆಯ ಕಾರ್ಯಕ್ರಮವನ್ನು ಸದಸ್ಯರಾದ ಉಮೇಶ್ ಕೋಟ್ಯಾನ್ ಇವರ ಆರ್ಥಿಕ ನೆರವಿನ ಮುಖಾಂತರ ಅಧ್ಯಕ್ಷರಾದ ಶಂಕರ್.ಎ.ಕೋಟ್ಯಾನ್ ಇವರು ವಿತರಿಸಿ ಪುಟಾಣಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಗಿರೀಶ್ ಕೋಟ್ಯಾನ್, ಸದಸ್ಯರಾದ ಉಮೇಶ್ ಕೋಟ್ಯಾನ್ ಹಾಗೂ ಅಂಗನವಾಡಿಯ ಶಿಕ್ಷಕರು, ಮತ್ತು ಮಕ್ಕಳ ಪೋಷಕರು ಹಾಜರಿದ್ದರು.

LEAVE A REPLY

Please enter your comment!
Please enter your name here