ಬೈಂದೂರು ಭಾಗದ ನಾಲ್ಕು ಶಾಲೆಗಳ ಕಿಶೋರ ಯಕ್ಷಗಾನ ಪ್ರದರ್ಶನ 24-12-25 ಮುಕ್ತಾಯಗೊಂಡಿತು. ಕರ್ನಾಟಕ ಪಬ್ಲಿಕ್ ಸ್ಕೂಲ್, ವಂಡ್ಸೆ ಇಲ್ಲಿಯ ಸಾಂಸ್ಕೃತಿಕ ಸಭಾಭವನದಲ್ಲಿ ಸಂಪನ್ನಗೊಂಡ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜೀವ ಶೆಟ್ಟಿ, ಬಿಜ್ರಿ ವಹಿಸಿದ್ದರು. ಎಂ.ಗಂಗಾಧರ ರಾವ್, ರಾಘವೇದ್ರ ನೆಂಪು, ರವಿರಾಜ ಶೆಟ್ಟಿ, ರಮೇಶ ದೇವಾಡಿಗ, ಅನಿಲ್ ಮೆಂಡನ್, ಶಾಂತಿಸಾಗರ ಶೆಟ್ಟಿ, ಎನ್. ಸಂತೋಷ್ ಕುಮಾರ್ ಶೆಟ್ಟಿ, ಕುಪ್ಪಯ್ಯ ಮರಾಠಿ, ಕೃಷ್ಣರಾಜ ಭಟ್ ಅಭ್ಯಾಗತರಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ತನುಶ್ರೀ,ಅನನ್ಯಾ, ಪ್ರಣತಿ,ಐಶ್ವರ್ಯ, ಮನಸ್ವಿ, ಸೃಷ್ಟಿ ಯಕ್ಷ ಶಿಕ್ಷಣದ ತಮ್ಮ ಅನುಭವ ಹಂಚಿಕೊಂಡರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸವಿತಾ, ಬೀರಮ್ಮ, ನಾರಾಯಣ ಎಂ.ಹೆಗಡೆ ಉಪಸ್ಥಿತರಿದ್ದರು. ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳನ್ನಾಡಿದರು. ಶ್ರೀಧರ ಭಟ್ ವಂದಿಸಿದರು. ಚಿತ್ತೂರು ರವಿರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ತಲ್ಲೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ‘ಕಂಸ ದಿಗ್ವಿಜಯ – ಕಂಸ ವಧೆ,’ ಹೆಮ್ಮಾಡಿಯ ಜನತಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ‘ದ್ರೌಪದಿ ಪ್ರತಾಪ’ ಪ್ರಸ್ತುತಗೊಂಡಿತು.

