ಜೈನ ಮಠ ಮೂಡುಬಿದಿರೆಯ ರಾಷ್ಟ್ರೀಯ ಜೈನ ಫೋರo ಪರಮ ಸಂರಕ್ಷಕರಾದ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ಸ್ವಾಮೀಜಿರವರು ಬಾಂಗ್ಲಾ ದೇಶದಲ್ಲಿ ಹಿಂದೂ ಸಮಾಜದ ರಕ್ಷಣೆ ಮತ್ತು ಸಂಘಟನೆಗಾಗಿ ಜಾಗೃತಗೊಳಿಸಿದ ಪ್ರಮುಖ ನಾಯಕ ಇಸ್ಕಾನ್ ಸಂಸ್ಥೆ ಯ ಹಿಂದೂ ಸಾಧು ಚಿನ್ಮಯ ಕೃಷ್ಣ ದಾಸ ಪ್ರಭು ಅವರ ಬಂಧನವನ್ನು ಖಂಡಿಸುತ್ತೆವೆ ಧರ್ಮಕ್ಕಾಗಿ ನ್ಯಾಯೋಚಿತ ಹೋರಾಟ ಮಾಡುವ ಅಮಾಯಕರನ್ನು ಭಯೋತ್ಪಾದಕರ ಹಣೆ ಪಟ್ಟಿಕಟ್ಟುದು ಮಹಾಅಪರಾಧ ಹಾಗೂ ಬಾಂಗ್ಲಾದೇಶದ ನಮ್ಮ ಸಹೋದರ ಧರ್ಮ ಹಿಂದೂಗಳ ರಕ್ಷಣೆಗೆ ಭಾರತ ಸರಕಾರ ಶೀಘ್ರ ರಾಜ ತಾಂತ್ರಿಕ ಕ್ರಮ ಕೈಗೊಳ್ಳಬೇಕು ಅಂತ ರಾಷ್ಟ್ರೀಯ ಹಕ್ಕು ಗಳ ಉಲ್ಲಂಘನೆ ಮಾಡುತ್ತಿರುವ ಧರ್ಮ ವಿರೋಧಿ ಬಾಂಗ್ಲಾ ಶಕ್ತಿಗಳನ್ನು ಹತ್ತಿಕ್ಕಲು ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೆವೆ ಎಂದು ಪ್ರಕರಣವನ್ನು ಖಂಡಿಸಿದ್ದಾರೆ.