Saturday, February 15, 2025
Homeತುಳುನಾಡುಕಾರ್ಕಳ ತಾಲೂಕಿನಲ್ಲಿ ಅತ್ಯಾಚಾರ ಪ್ರಕರಣ: ಶ್ರೀರಾಮ ಸೇನೆ ಕಾರ್ಕಳ ತೀರ್ವ ಖಂಡನೆ

ಕಾರ್ಕಳ ತಾಲೂಕಿನಲ್ಲಿ ಅತ್ಯಾಚಾರ ಪ್ರಕರಣ: ಶ್ರೀರಾಮ ಸೇನೆ ಕಾರ್ಕಳ ತೀರ್ವ ಖಂಡನೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಶುಕ್ರವಾರ ನಡೆದಂತಹ ಘಟನೆ ಇದು ಇಡೀ ಮನುಕುಲ ತಲೆ ತಗ್ಗಿಸುವ ಘಟನೆ ಆಗಿದೆ.. ಕಾರ್ಕಳದ ಇತಿಹಾಸದಲ್ಲಿ ಯಾವತ್ತೂ ಇಂತಹ ಪೈಶಾಚಿಕ ಕೃತ್ಯ ನಡೆದ ಇತಿಹಾಸನೇ ಇಲ್ಲ.. ಹಿಂದೂ ಸಮಾಜದ ಒಂದು ಬಡ ಹೆಣ್ಣು ಮಗಳ ಮೇಲೆ ಅಮಲು ಪದಾರ್ಥ(ಡ್ರಗ್ಸ್ ) ನೀಡಿ ಒಬ್ಬ ಜಿಹಾದಿ ಮನಸ್ಥಿತಿಯ ಮುಸ್ಲಿಂ ಯುವಕ ತಾನು ಅತ್ಯಾಚಾರ ಮಾಡಿದ್ದು ಅಲ್ಲದೇ ತನ್ನ ಸ್ನೇಹಿತರಿಗೂ ಅತ್ಯಾಚಾರ ಮಾಡುವಂತೆ ಪ್ರೆರೇಪಿಸಿ ಬಡ ಬೋವಿ ಸಮಾಜದ ಹೆಣ್ಣು ಮಗಳ ಮೇಲೆ ಹೀನಾಯವಾಗಿ ಅತ್ಯಾಚಾರ ಮಾಡಿರುತ್ತಾರೆ… ಇದನ್ನು ಇಡೀ ಹಿಂದೂ ಸಮಾಜ ಖಂಡಿಸಲೇಬೇಕಿದೆ… ಕಾರ್ಕಳದ ಪರಿಸರದಲ್ಲಿ ಆಗುವಂತಹ ಡ್ರಗ್ಸ್ ಮಾಫಿಯ ಗಾಂಜಾ ವ್ಯಸನ ಈ ಎಲ್ಲಾ ದುಸ್ಕೃತ್ಯಗಳಿಗೆ ಪ್ರೇರಣೆ ನೀಡುವಂತಿದೆ… ಪೊಲೀಸ್ ಇಲಾಖೆ ಮೇಲೆ ನಮಗೆ ನಂಬಿಕೆ ಇದೆ.. ಸಮಾಜದಲ್ಲಿ ನಡೆಯುವ ಈ ಡ್ರಗ್ಸ್ ಮಾಫಿಯವನ್ನು ಆದಷ್ಟು ಬೇಗ ಮಟ್ಟ ಹಾಕಿ ಅತ್ಯಾಚಾರಕ್ಕೆ ಒಳಗಾದ ಹಿಂದೂ ಹೆಣ್ಣು ಮಗಳಿಗೆ ನ್ಯಾಯ ದೊರಕಿಸುವಲ್ಲಿ ನಮ್ಮ ಪೊಲೀಸ್ ಇಲಾಖೆ ಪಾರದರ್ಶಕ ತನಿಖೆ ನಡೆಸಬೇಕು ಎಂದು ನಮ್ಮ ಆಗ್ರಹ… ಹಾಗೇನೇ ಸೋಮವಾರ ಕಾರ್ಕಳದಲ್ಲಿ ಹಿಂದೂ ಹಿತರಕ್ಷಣ ಸಮಿತಿಯಿಂದ ನಡೆಯುವ ಬೃಹತ್ ಮೆರವಣಿಗೆ ಹಾಗೂ ಖಂಡನಾ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಹಾಗೂ ಹಿಂದೂ ಸಮಾಜ ಸೇರಬೇಕು.. ಇಡೀ ಕಾರ್ಕಳ ಜನತೆಗೆ ಒಂದು ದೊಡ್ಡ ಸಂದೇಶವನ್ನು ನೀಡಬೇಕು ಎಂದು ಶ್ರೀರಾಮ ಸೇನೆ ಕಾರ್ಕಳ ಅಗ್ರಹಿಸುತ್ತದೆ.

RELATED ARTICLES
- Advertisment -
Google search engine

Most Popular