Saturday, July 20, 2024
Homeನಿಧನಖ್ಯಾತ ಸಾಹಿತಿ, ಸಂಶೋಧಕಿ, ಉತ್ತಮ ವಾಗ್ಮಿ, ಆದರ್ಶ ಉಪನ್ಯಾಸಕಿ ಕಮಲಾ ಹಂಪನಾ ನಿಧನಕ್ಕೆ ಸಂತಾಪ

ಖ್ಯಾತ ಸಾಹಿತಿ, ಸಂಶೋಧಕಿ, ಉತ್ತಮ ವಾಗ್ಮಿ, ಆದರ್ಶ ಉಪನ್ಯಾಸಕಿ ಕಮಲಾ ಹಂಪನಾ ನಿಧನಕ್ಕೆ ಸಂತಾಪ

ಖ್ಯಾತ ಸಾಹಿತಿ, ಸಂಶೋಧಕಿ, ಉತ್ತಮ ವಾಗ್ಮಿ, ಆದರ್ಶ ಉಪನ್ಯಾಸಕಿ ಕಮಲಾ ಹಂಪನಾ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಸದಾ ಅಧ್ಯಯನಶೀಲರಾಗಿ, ಸಾಕಷ್ಟು ಲೇಖನಗಳನ್ನೂ, ಪುಸ್ತಕಗಳನ್ನೂ ಅವರು ಬರೆದಿದ್ದಾರೆ. ಅನೇಕ ಗ್ರಂಥಗಳ ಸಂಪಾದನೆ ಮಾಡಿದ್ದಾರೆ. ಜೈನಧರ್ಮದ ಬಗ್ಯೆ ಅವರು ಸಂಶೋಧನೆ ನಡೆಸಿ, ಅನೇಕ ಉಪಯುಕ್ತ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳದಲ್ಲಿ ನಾವು ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸುವ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದಾರೆ. ಉತ್ತಮ ವಾಗ್ಮಿಯಾದ ಅವರು ಅನೇಕ ಸಮಾರಂಭಗಳಲ್ಲಿ ಉಪನ್ಯಾಸವನ್ನೂ ನೀಡಿದ್ದಾರೆ.
ಇಂತಹ ಶ್ರೇಷ್ಠ ಸಾಹಿತಿಯನ್ನು ಕಳೆದುಕೊಂಡು ಕನ್ನಡ ನುಡಿ, ಭಾಷೆ ಬಡವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES
- Advertisment -
Google search engine

Most Popular