ಮಂಗಳೂರು: ಹಿರಿಯ ರಂಗಕರ್ಮಿ, ಸಿನಿಮಾ ನಿರ್ಮಾಪಕ ಸದಾನಂದ ಸುವರ್ಣರ ನಿಧನಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಶ್ರೀ ತಾರಾನಾಥ್ ಗಟ್ಟಿ ಕಾಪಿಕಾಡ್ ರವರು ಸಂತಾಪ ಸೂಚಿಸಿದ್ದಾರೆ. “ಗುಡ್ಡೆದ ಭೂತ” ನಾಟಕ ಹಾಗೂ ಟೆಲಿ ಧಾರವಾಹಿ ಮೂಲಕ ಮನೆ ಮಾತಾಗಿದ್ದ ಸದಾನಂದ ಸುವರ್ಣರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ 2001-2004 ರ ಸಾಲಿನಲ್ಲಿ ಸದಸ್ಯರಾಗಿ ಅನನ್ಯ ಸೇವೆ ಸಲ್ಲಿಸಿದ್ದರು. ತುಳುನಾಡು ಓರ್ವ ಶ್ರೇಷ್ಠ ನಿರ್ದೇಶಕ, ನಿರ್ಮಾಪಕನನ್ನು ಕಳೆದು ಕೊಂಡಿದೆ ಎಂದು ಅವರು ಸಂತಾಪ ಸಂದೇಶ ತಿಳಿಸಿದ್ದಾರೆ.