ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷರು, ಹಿರಿಯ ಕಾಂಗ್ರೆಸಿಗರು, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳ ಮಹಾಪೋಷಕರು, ಹಲವಾರು ಸಂಘಸಂಸ್ಥೆಗಳ ಬೆನ್ನೆಲುಬಾಗಿ ನಿಂತ ಹಿರಿಯ ಚೇತನ, ಮಿತ ಭಾಷಿಯ ಸ್ನೇಹಮಯಿ ವ್ಯಕ್ತಿತ್ವದ ನನ್ನ ಒಡನಾಡಿ ಡಿ.ಆರ್. ರಾಜು ಅವರ ಅಗಲುವಿಕೆಯ ಸುದ್ದಿಯು ಮನಸ್ಸಿಗೆ ಅತೀವ ನೋವುಂಟು ಮಾಡಿದೆ. ರಾಜಣ್ಣನವರ ಅಗಲುವಿಕೆಯು ಸಮಾಜಕ್ಕೆ ಹಾಗು ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ. ಸಮಾಜದ ಆಗುಹೋಗುಗಳಿಗೆ, ಅಸಹಾಯಕರ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಜನಾನುರಾಗಿಯಾಗಿದ್ದ ಡಿ.ಆರ್. ರಾಜು ಅವರು ಈ ಸಮಾಜ ಕಂಡ ಶ್ರೇಷ್ಠ ಮಾನವತಾವಾದಿಯಾಗಿದ್ದರು.
ಅವರ ಕುಟುಂಬ ವರ್ಗಕ್ಕೆ, ಬಂದು ಬಾಂದವರಿಗೆ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ, ಅಗಲಿದ ದಿವ್ಯಾತ್ಮಕ್ಕೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸುತ್ತೇನೆ ಎಂದು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ತಮ್ಮ ಸಂತಾಪ ಪತ್ರದಲ್ಲಿ ತಿಳಿಸಿದ್ದಾರೆ.