ಬೆಂಗಳೂರು: ಬಸ್ಸುಗಳಲ್ಲಿ ಚೇಂಜ್ ನೀಡದಿರುವುದಕ್ಕೆ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ದಿನ ನಿತ್ಯ ಗಲಾಟೆಗಳು ಆಗುತ್ತಿರುತ್ತವೆ. ಕೆಲವೊಂದು ಬಸ್ಸುಗಳಲ್ಲಿ ಒಂದು, ಎರಡು, ಐದು ರೂಪಾಯಿ ಚೇಂಜ್ ಕೊಡಲು ಬಾಕಿಯಿದ್ದರೆ, ಅದನ್ನು ಕೊಡುವುದೇ ಇಲ್ಲ. ಅದನ್ನು ಹಿಂದಿರುಗಿಸದಿರುವುದು ತನ್ನ ಹಕ್ಕು ಎಂಬಂತೆ ಕೆಲವು ಕಂಡಕ್ಟರ್ ಗಳು ವರ್ತಿಸುವುದನ್ನು ನಾವು ಕಾಣುತ್ತಿರುತ್ತೇವೆ.
ಬೆಂಗಳೂರಿನ ಬಿಎಂಟಿಸಿ ಬಸ್ಸಿನಲ್ಲಿ ಕಂಡಕ್ಟರ್ ಒಬ್ಬರು ಪ್ರಯಾಣಿಕರೊಬ್ಬರಿಗೆ 5 ರೂ ಚಿಲ್ಲರೆ ಬಾಕಿ ಉಳಿಸಿಕೊಂಡಿದ್ದಕ್ಕೆ ಅದನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ನಿತಿನ್ ಕೃಷ್ಣ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಕಂಡಕ್ಟರ್ ಬಳಿ 1 ರೂಪಾಯಿ ಚೇಂಜ್ ಕೂಡ ಇಲ್ಲವೇ? ನಾನು ನನ್ನ 5 ರೂಪಾಯಿ ಕಳೆದುಕೊಂಡೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ? ಎಂದು ಬಿಎಂಟಿಸಿಯ ಅಧಿಕೃತ ಎಕ್ಸ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.