ದಾವಣಗೆರೆ:ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ದಾವಣಗೆರೆ ಜಿಲ್ಲಾ ವರಿದಗಾರರ ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪತ್ರಕರ್ತ ನಾಗರಾಜ್ ಬಡದಾಳ್‌ರವರಿಗೆ ಇತ್ತೀಚಿಗೆ ಜಿಲ್ಲಾ ವರಿದಗಾರರ ಕೂಟದ ಸಭಾಂಗಣದಲ್ಲಿ ಅಭಿನಂದಿಸಿ, ಸನ್ಮಾನಿಸಲಾಯಿತು ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಕಲಾಕುಂಚ ಅಧ್ಯಕ್ಷರಾದ ಕೆ.ಎಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ, ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಸಮಿತಿ ಸದಸ್ಯರಾದ ಬಿ. ಶಾಂತಪ್ಪ ಪೂಜಾರಿ, ಚನ್ನಬಸವ ಶೀಲವಂತ ಮುಂತಾದವರು ಉಪಸ್ಥಿತರಿದ್ದರು.