Thursday, July 25, 2024
Homeರಾಜ್ಯಗಡಿನಾಡ ಚೇತನ ಪ್ರಶಸ್ತಿ ಪಾತ್ರರಾದ ರಾಧಾಕೃಷ್ಣ ಉಳಿಯತ್ತಡ್ಕರಿಗೆ ಅಭಿನಂದನೆ

ಗಡಿನಾಡ ಚೇತನ ಪ್ರಶಸ್ತಿ ಪಾತ್ರರಾದ ರಾಧಾಕೃಷ್ಣ ಉಳಿಯತ್ತಡ್ಕರಿಗೆ ಅಭಿನಂದನೆ

ಬದಿಯಡ್ಕ: ಕರ್ನಾಟಕ ಸರಕಾಋದ ಗಡಿ ಅಭಿವೃದ್ಧಿ ಪ್ರಾಧಿಕಾರದ ಗಡಿನಾಡ ಚೇತನ ಪ್ರಶಸ್ತಿಗೆ ಭಾಜನರಾಧ ಕಾಸರಗೋಡಿನ ಹಿರಿಯ ಸಾಹಿತಿ,ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಅಭಿಮಾನಿ ಬಳಗದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನೀರ್ಚಾಲಿನಲ್ಲಿ ನಡೆಯಿತು. ಕೆಯ್ಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ,ಕವಿ ಬಾಲಕೃಷ್ಣ ಬೇರಿಕೆ ಅವರ ಅಧ್ಯಕ್ಷತೆಯಲಿ ನಡೆದ ಕಾರ್ಯಕ್ರಮದಲಿ ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ದರ್ಬೆತ್ತಡ್ಕ ರಾಧಾಕೃಷ್ಣ ಅವರನ್ನು ಅಭಿನಂದಿಸಿದರು. ಬದಿಯಡ್ಕ ಗ್ರಾ.ಪಂ.ಮಾಜಿ ಸದಸ್ಯ ಗಂಗಾಧರ ಗೋಳಿಯಡ್ಕ, ನಾರಾಯಣ ಬಾರಡ್ಕ, ಬೊಲಿಕೆ ಜಾನಪದ ಕಲಾ ತಂಡದ ನಿರ್ದೇಶಕ ಶಂಕರ ಸ್ವಾಮಿ ಕೃಪಾ,ಶರಣ್ಯ ನಾರಾಯಣನ್, ದಿವ್ಯಾ ಗಟ್ಟಿ ಪರಕ್ಕಿಲ, ವನಜಾಕ್ಷಿ ಚಂಬ್ರಕಾನ, ರಂಜಿತಾ ಪಟ್ಟಾಜೆ ಮೊದಲಾದವರು ಮಾತನಾಡಿದರು. ಉದಯ ಕುಮಾರ್ ಎಂ.ಪ್ರಾಸ್ತವನೆಗೈದರು. ಸುಂದರ ಬಾರಡ್ಕ ಸ್ವಾಗತಿಸಿ ರಾಂ ಪಟ್ಟಾಜೆ ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು.

RELATED ARTICLES
- Advertisment -
Google search engine

Most Popular