ಉಡುಪಿ ಒಳಕಾಡು ವಾರ್ಡ್ ನಾಗರಿಕರಿಂದ ಉಡುಪಿ ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷೆಯಾಗಿ ರಜನಿ ಹೆಬ್ಬಾರ್ ಗೆ ಗೌರವ ಅಭಿನಂದನೆ ಸಮಾರಂಭ ಆ 31 ರಂದು ಸರಸ್ಪತಿ ಸಭಾ ಭವನ ದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ಮಾತನಾಡಿ ಬಿಜೆಪಿಗೆ ಭದ್ರ ಬುನಾದಿ ಹಾಕಿ ಕೊಟ್ಟ ಒಳ ಕಾಡು ವಾರ್ಡ್ ಈ ನಿಟ್ಟಿನಲ್ಲಿ ಕಾರ್ಯ ಕರ್ತರ ಪಾತ್ರ ಬಹು ದೂಡ್ಡದು,ಇಲ್ಲಿನ ಬಯಲು ರಂಗ ಮಂದಿರ ಸಮೇತ ಇತರೆ ಅಭಿವೃದ್ದಿ ಮಾಡುವಲ್ಲಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು ಈ ,ವಾರ್ಡಿನಲ್ಲಿ ಈ ಹಿಂದೆ ಬಹಳಷ್ಟು ಕೆಲಸ ಮಾಡಿದ ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷೆಯಾಗಿ ರಜನಿ ಹೆಬ್ಬಾರ್ ಗೆ ಶುಭ ಹಾರೈಸಿದರು, ವೇದಿಕೆಯಲ್ಲಿ ನಗರ ಸಭಾ ಸದಸ್ಯರಾದ ಟಿ ಜೆ ಹೆಗ್ದೆ,ಗಿರೀಶ ಕಾಂಚನ್ ,ಬಿಜೆಪಿ ಉಡುಪಿ ನಗರ ಅಧ್ಯಕ್ಷ ದಿನೇಶ್ ಅಮೀನ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀ ಶ ನಾಯಕ್ ಪೆರ್ಣಂಕಿಲ , ಅಮರನಾಥ್ ಪ್ರಭು , ಶಶಿಕಲಾ , ಮಹೇಶ್ ಶೆಣೈ , ರವೀಂದ್ರ ಪೈ , ನೂರಾರು ಬಿಜೆಪಿ ಕಾರ್ಯ ಕರ್ತರು , ಅಭಿಮಾನಿಗಳು ಉಪಸ್ಥಿತರಿದ್ದರು.
ಮಂಜುನಾಥ್ ಹೆಬ್ಬಾರ್ ಸ್ವಾಗತಿಸಿದರು , ಬೂತ್ ಅಧ್ಯಕ್ಷ ಪ್ರತಾಪ್ ಶೆಟ್ಟಿ ವಂದಿಸಿದರು.