ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ (ರಿ,). ಗುರುವಾಯನಕೆರೆ ಬೆಳ್ತಂಗಡಿ ತಾಲೂಕು ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ರವಿ ಎನ್ ರವರು “ಪಂಜುರ್ಲಿ ದೈವದ ಪ್ರಧಾನ್ಯತೆ ಪ್ರದರ್ಶನಾತ್ಮಕತೆ, ಮಾನವ ಸಂಪನ್ಮೂಲ ಅಭಿವೃದ್ಧಿ ಆಧಾರಿತ ಅಧ್ಯಯನ” ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿ ಹೆಚ್ ಡಿ ಪಧವಿಯನ್ನು ನೀಡಿರುತ್ತಾರೆ.
ಈ ಶುಭಸಂದರ್ಭದಲ್ಲಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಪರವಾಗಿ ಭಕ್ತಿಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. ನಿಯೋಗದಲ್ಲಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜ, ಯುವವೇದಿಕೆಯ ಅಧ್ಯಕ್ಷರು, ತಾಲೂಕು ಸಂಘದ ನಿರ್ದೇಶಕರಾದ ಉಮೇಶ್ ಕುಲಾಲ್, ತಾಲೂಕು ಸಂಘದ ನಿರ್ದೇಶಕರಾದ ಹರಿಶ್ಚಂದ್ರ ಕುಲಾಲ್ ಮತ್ತು ಪ್ರವೀಣ್ ಕುಲಾಲ್ ಉಪಸ್ಥಿತರಿದ್ದರು.