Saturday, December 14, 2024
Homeಮುಲ್ಕಿತೋಕೂರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಗುರು ವೃಂದಕ್ಕೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗೌರವ ಅಭಿನಂದನೆ

ತೋಕೂರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಗುರು ವೃಂದಕ್ಕೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗೌರವ ಅಭಿನಂದನೆ

ಶಿಕ್ಷಕರ ಮೂಲಕವೇ ವಿದ್ಯಾರ್ಥಿಯ ಭವಿಷ್ಯ: ಶ್ರೀ ಶಿವ ಕುಮಾರ್ .ಬಿ.ಎಂ

ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ,ಮಂಗಳೂರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮಂಗಳೂರು, ಜಿಲ್ಲಾಡಳಿತ,ದ.ಕ.ಜಿಲ್ಲಾ ಪಂಚಾಯತ್,ಗ್ರಾಮ ಪಂಚಾಯತ್ ಪಡುಪಣಂಬೂರು, ತಾಲೂಕು ಮತ್ತು ಜಿಲ್ಲಾ ಯುವಜನ ಒಕ್ಕೂಟ,ದ.ಕ.ಜಿಲ್ಲೆ,
ಇವರುಗಳ ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ 2021 ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರರಸ್ಕೃತ, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.) ತೋಕೂರು,ಹಳೆಯಂಗಡಿ ಇದರ ಆಶ್ರಯದಲ್ಲಿ, ಮಾಜಿ ರಾಷ್ಟ್ರಪತಿ ದಿ. ಸರ್ವಪಲ್ಲಿ ರಾಧಾಕೃಷ್ಣನ್
ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ದಿನಾಂಕ 08.09.2024 ರಂದು ರವಿವಾರ ಬೆಳಿಗ್ಗೆ ಘಂಟೆ 9:00 ಕ್ಕೆ ಸ್ಪೋರ್ಟ್ಸ್ ಕ್ಲಬ್ ನ ಸಭಾಂಗಣದಲ್ಲಿ ಜರಗಿತು.

▪ ಆಂಗ್ಲ ಮಾಧ್ಯಮ ಶಾಲೆ ಎನ್. ಐ. ಟಿ.ಕೆ ಇಲ್ಲಿನ ಉಪ ಪ್ರಾಂಶುಪಾಲರು ಆಶಾ ಶ್ರೀನಿವಾಸ್ ಅವರು ದೀಪ ಪ್ರಜ್ವಲಿಸಿ ದಿ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

▪ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಾದ ಸುರೇಶ್ ಶೆಟ್ಟಿ, ಗೌತಮ್ ಬೆಲ್ಚಡ, ಮಹಿಳಾ ಸದಸ್ಯೆಯರಾದ ಶರ್ಮಿಳಾ.ಆರ್ ಮತ್ತು ಗೀತಾ.ಟಿ ಇವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.

▪ ಸರಕಾರಿ ಪ್ರೌಢ ಶಾಲೆ ಬೆಂಗ್ರೆ,ಕಸಬ ಮಂಗಳೂರು ಇಲ್ಲಿನ ನಿವೃತ್ತ ಮುಖ್ಯೋಪಾಧ್ಯಾಯರಾದ ಮಹಮ್ಮದ್ ಹುಸೇನ್ ತೋಕೂರು, ಮತ್ತು ಕೆರೆಕಾಡು ಅಂಗನವಾಡಿ ಕೇಂದ್ರದ ನಿವೃತ್ತ ಶಿಕ್ಷಕಿ ಪಾರ್ವತಿ ಇವರನ್ನು ಶಾಲು, ಹಾರ, ಫಲ-ಪುಷ್ಪ ಮತ್ತು ಸನ್ಮಾನ ಪತ್ರ ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

▪ ಸನ್ಮಾನ ಸ್ವೀಕರಿಸಿ ಮಾತನಾಡಿದ ಸನ್ಮಾನಿತರಾದ ಮಹಮದ್ ಹುಸೇನ್ ಇವರು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ,ಶಿಕ್ಷಕ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಿರುವ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯವೈಖರಿಯನ್ನು ಶ್ಲಾಘಿಸಿದರು ಹಾಗೂ ಗುರುಗಳನ್ನು ಗೌರವದಿಂದ ಕಾಣುವುದು ತಮ್ಮ ಕರ್ತವ್ಯವಾಗಿದ್ದು,ಸತ್ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಯೋಗದಾನ ಬಹಳಷ್ಟುಇದೆ ಎಂದು ಹೇಳಿದರು.

▪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಪ್ರಥಮ ದರ್ಜೆ.ಕಾಲೇಜು,ಹಳೆಯಂಗಡಿ,
ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ಶಿವ ಕುಮಾರ್.ಬಿ.ಎಂ ಅವರು ಮಾತನಾಡಿ ಯುವ ಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ನೀಡುವ ಗುರುಗಳ ಪಾತ್ರ ಮಹತ್ವದ್ದಾಗಿದೆ. ದಿ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ನಮ್ಮ ದೇಶಕ್ಕೆ ನೀಡಿರುವ ಕೊಡುಗೆ ಬಗ್ಗೆ ಹಾಗೂ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

▪ ವೇದಿಕೆಯಲ್ಲಿ ಗಣ್ಯರೊಂದಿಗೆ ಕ್ಲಬ್ ನ ಅಧ್ಯಕ್ಷರಾದ ದೀಪಕ್ ಸುವರ್ಣ,ಮಹಿಳಾ ಕಾರ್ಯಾಧ್ಯಕ್ಷೆ ಯಶೋಧ ದೇವಾಡಿಗ, ಉಪಸ್ಥಿತರಿದ್ದರು.

▪ ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಸದಸ್ಯ ಸಂತೋಷ್ ಕುಮಾರ್, ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು,ಸದಸ್ಯೆಯರು, ಗ್ರಾಮಸ್ಥರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

▪ಪ್ರಸ್ತುತ ಶಿಕ್ಷಕಿಯರಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಸದಸ್ಯೆಯರಾದ ಸುರೇಖಾ ಕಲ್ಲಾಪು ಮತ್ತು ಗೀತಾ ಸುರೇಶ್ ದೇವಾಡಿಗ ಇವರನ್ನು ಅಭಿನಂದಿಸಲಾಯಿತು.

▪ ಸಾಂಸ್ಕೃತಿಕ ಕಾರ್ಯದರ್ಶಿ ಗೀತಾ.ಎಸ್.ಶೆಟ್ಟಿಗಾರ್ ಪ್ರಾರ್ಥಿಸಿದರು.

▪ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರು ದೀಪಕ್ ಸುವರ್ಣ ಸ್ವಾಗತಿಸಿದರು.

▪ ಮಹಿಳಾ ಜೊತೆ ಕಾರ್ಯದರ್ಶಿ ಸುರೇಖಾ ಕಲ್ಲಾಪು ವಂದಿಸಿದರು.

▪ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಸಹಕರಿಸಿದರು.

▪ ಸಂಸ್ಥೆಯ ಕೋಶಾಧಿಕಾರಿ ಸುನೀಲ್ ಜಿ.ದೇವಾಡಿಗ ಹಾಗೂ ಮಹಿಳಾ ಸದಸ್ಯೆ ಪವಿತ್ರಾ ಪ್ರಸಾದ್ ಆಚಾರ್ಯ ಸನ್ಮಾನಿತರನ್ನು ಪರಿಚಯಿಸಿದರು.

▪ ಜೊತೆ ಕಾರ್ಯದರ್ಶಿ ಚಂದ್ರ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular