ಕೊರಗ ಸಮುದಾಯವು ಆದಿಮ ಅತೀ ಹಿಂದುಳಿದ ಬುಡಕಟ್ಟು ಪಂಗಡ ವಾಗಿದ್ದು ಕೇಂದ್ರಸರ್ಕಾರವು 1986 ರಲ್ಲಿ ಕರ್ನಾಟಕ ರಾಜ್ಯದಲ್ಲಿ ಅಂಚಿಗೆ ತಳ್ಳಲ್ಪಟ್ಟ ಬುಡಕಟ್ಟು ಸಮುದಾಯ (ಪಿ. ವಿ. ಟಿ. ಜಿ) ಎಂದು ಘೋಷಿಸಿದೆ. ಕುಸಿಯುತ್ತಿರುವ ಜನಸಂಖ್ಯೆ, ಅಜಲು, ಅಸ್ಪೃಶ್ಯತೆ ಮತ್ತು ಬಡತನ ಕಾರಣದಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಔದ್ಯೋಗಿಕ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಕಾಣದೆ ಕೊರಗರ ಅಭಿವೃದ್ಧಿಯು ನಿಧಾನಗತಿಯಲ್ಲಿ ಸಾಗುತ್ತಿದೆ.
ಇತ್ತೀಚಿನ ಕಳೆದ ಕೆಲವು ವರುಷ ಗಳಿಂದ ಶಿಕ್ಷಣ ಪಡೆದ ಬೆರಳಣಿಕೆಯಷ್ಟು ಮಂದಿ ಉದ್ಯೋಗ ವಿಲ್ಲದೆ ನಿರುದ್ಯೋಗಿಗಳಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟವು ಉಡುಪಿ ಜಿಲ್ಲಾಧಿಕಾರಿ ಕಚೇರಿಯೆದುರು ದಿನಾಂಕ 22-07-2024 ರಿಂದ ನಿರಂತರವಾಗಿ ಹತ್ತು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿ ಕೊರಗ ಸಮುದಾಯಕ್ಕೆ ವಿಶೇಷವಾಗಿ ನೇರ ನೇಮಕಾತಿ ಮೂಲಕ ಉದ್ಯೋಗ ಕಲ್ಪಿಸಬೆಕೆಂದು ಸರ್ಕಾರಕ್ಕೆ ಒತ್ತಾಯಿಸಿತ್ತು.
ನಿನ್ನೆ ಕರ್ನಾಟಕ ಸರ್ಕಾರದ ಘನತೆವೆತ್ತ ಮುಖ್ಯಮಂತ್ರಿ ಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರು 2025-26 ನೇ ಸಾಲಿನ ಬಜೆಟ್ ನಲ್ಲಿ ಕೊರಗರು ಒಳಗೊಂಡಂತೆ ಅರಣ್ಯದಂಚಿನ ಬುಡಕಟ್ಟುಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಲು 200 ಕೋಟಿ ಅನುದಾನ ಮತ್ತು ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿದ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿಯನ್ನು ಕೈಗೊಳ್ಳುವುದು ಎಂದು ಘೋಷಿಸಿದ್ದಾರೆ.
ಈ ಸಂಧರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ – ಕೇರಳ ಸಮಸ್ತ ಕೊರಗ ಸಮುದಾಯದ ಪರವಾಗಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಂಪುಟದ ಎಲ್ಲಾ ಸಚಿವರನ್ನು ಅಭಿನಂದಿಸುತ್ತದೆ.
ಈ ವರದಿಯನ್ನು ತಮ್ಮ ಜನಪ್ರಿಯ ಪತ್ರಿಕೆಯಲ್ಲಿ ಪ್ರಕಟಿಸಿ ಕೊರಗ ಸಮುದಾಯದ ಅಭಿವೃದ್ಧಿಗೆ ಕೈ ಜೋಡಿಸುವಿರಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.