Friday, March 21, 2025
Homeಪುತ್ತೂರುಕೆಲಿಂಜ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಕಾರ್ಯಕ್ರಮ

ಕೆಲಿಂಜ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಕಾರ್ಯಕ್ರಮ

ವಿಟ್ಲ : ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕೆಲಿಂಜ ಘಟಕದ ಅಶ್ರಯದಲ್ಲಿ ಕೆಲಿಂಜ ಮೆಚ್ಚಿ ಜಾತ್ರೆಯ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 2024 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದೈವನರ್ತಕರಾದ ಶ್ರೀ ಶೇಖರ ಪರವ ಕಾಪುಮಜಲು ಹಾಗೂ ನಾದಸ್ವರ ವಾದಕರಾದ ಶ್ರೀ ಗೋಪಾಲ ಜೋಗಿ ಕಾಪುಮಜಲು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ರಾದ ಚಿತ್ತರಂಜನ್ ಪೆಲ್ತಡ್ಕ ವಹಿಸಿದ್ದು ಕೊರಗಪ್ಪ ಗೌಡ ಅಡ್ಯೆಯಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಪ್ರಮುಖರಾದ ಪದ್ಮನಾಭ ಗೌಡ ಅಡ್ಯೆಯಿ ,ಶ್ರೀಧರ ಗೌಡ ನಡುವಳಚ್ಚಿಲು , ಜಯಪ್ರಸಾದ್ ಶೆಟ್ಟಿ ಕಲ್ಮಲೆ ,ಸಂದೀಪ್ ಪೂಜಾರಿ ಪೆಲ್ತಡ್ಕ, ಚೇತನ್ ಶೆಟ್ಟಿ ಪೆಲ್ತಡ್ಕ ,ನಾರಾಯಣ ಗೌಡ ಅಡ್ಯೆಯಿ ,ಸಂತೋಷ್ ಕಲ್ಮಲೆ ,ಪ್ರವೀಣ್ ಕಲ್ಮಲೆ,ಸಚ್ಚಿದಾನಂದ ಪೆಲ್ತಡ್ಕ ,ಅಮಿತ್ ಪಡೀಲ್ ,ರಂಜೀತ್ ಪಡೀಲ್ ,ಪುಷ್ಪರಾಜ್ ಕಲ್ಮಲೆ,ಜಗದೀಶ್ ನಗ್ರಿಮೂಲೆ,ದಿವ್ಯರಾಜ್ ಕಲ್ಮಲೆ,ಶ್ರೀಧರ ಗೌಡ ವಳಕುಡ್ಡೆ ,ಅಭಿಲಾಷ್ ಮಾಡಾದಾರ್, ಜನಾರ್ದನ‌ ಕೆಲಿಂಜ,ವಿಶ್ವನಾಥ ಕೆಲಿಂಜ ,ಅರುಣ್ ಪಡೀಲ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular