ಮಂಗಳೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ದೈವಸ್ಥಾನಗಳ ನೇಮೋತ್ಸವದಲ್ಲಿ ಪಾಲ್ಗೊಂಡರು. ವಾಮಂಜೂರು ತಿರುವೈಲು ಪರಾರಿ ಶ್ರೀ ಕೋರ್ದಬ್ಬು ದೈವಸ್ಥಾನದ ನೇಮೋತ್ಸವ, ಸತ್ಯಸಾರಮಾಣಿ ಅಲೇರ ಪಂಜುರ್ಲಿ ದೈವಸ್ಥಾನದ 24ನೇ ವರ್ಷದ ಸಿರಿಸಿಂಗಾರದ ನೇಮೋತ್ಸವ, ಅಡ್ಯಾರುಪದವು ಶ್ರೀ ದೈವರಾಜ ಕೋರ್ದಬ್ಬು ಪಂಜುರ್ಲಿ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ವಾಮಂಜೂರು ತಿರುವೈಲು ಪರಾರಿ ಶ್ರೀ ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಕೊಳಕೆಬೈಲು, ಚಂದ್ರಶೇಖರ್ ಕುಟ್ಟಿಬಳಿಕೆ, ಸಂದೇಶ್ ಶೆಟ್ಟಿ, ಜಾರಪ್ಪ ಪೂಜಾರಿ ಗುತ್ತಿಗೆ, ಯತೀಶ್ ಶೆಟ್ಟಿ ಕೊಳಕೆಬೈಲು, ಅರ್ಚಕ ಉಮೇಶ್ ಪಿ., ಸತ್ಯಸಾರಮಾಣಿ ಅಲೇರ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷ ನಾಗೇಶ್, ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಅರ್ಚಕ ರಾಧಾಕೃಷ್ಣ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮನೋಜ್, ದುರ್ಗಾಪರಮೇಶ್ವರಿ ಭಜನಾ ಮಂದಿರ ಅಧ್ಯಕ್ಷ ಅಭಿಷೇಕ್, ಮಧುಶ್, ಅಶೋಕ್ ರಾಜ್, ಸುಧೀರ್, ಹರೀಶ್ ಪಿ., ಸೋಮಯ್ಯ, ಅಡ್ಯಾರುಪದವು ಶ್ರೀ ದೈವರಾಜ ಕೋರ್ದಬ್ಬು ಪಂಜುರ್ಲಿ ದೈವಸ್ಥಾನ ಸಮಿತಿ ಅಧ್ಯಕ್ಷ ಮೋಹನ್ ಸಾಲ್ಯಾನ್, ಕಾರ್ಯದರ್ಶಿ ಜನಾರ್ದನ ಅಮೀನ್, ಗುರಿಕಾರ ಕೋಟಿ, ಅಡ್ಯಾರ್ ಪದವು ಗ್ರಾ.ಪಂ. ಸದಸ್ಯರಾದ ತುಳಸಿ, ರೋನಾಲ್ಡ್ ಸಲ್ದಾನಾ, ರವಿ, ಲೋಹಿತ್, ಸತೀಶ್, ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.